ಅರ್ಹತೆ: ಡಿ-ನೋಟಿಫೈಡ್, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಮುಕ್ತ.
12ನೇ ತರಗತಿಯ ನಂತರ ಜೆಇಇ, ನೀಟ್, ಕ್ಲಾಟ್, ಎನ್‌ಡಿಎ, ನಾನ್-ಕಮಿಷನ್ಡ್ ಮಿಲಿಟರಿ ರ್‍ಯಾಂಕ್ಸ್, ಸಿಎ-ಸಿಪಿಟಿ, ಬ್ಯಾಂಕಿಂಗ್, ಇನ್ಶೂರೆನ್ಸ್, ಪಿಎಸ್‌ಯು, ಎಸ್‌ಎಸ್‌ಸಿ, ಆರ್‌ಆರ್‌ಬಿ, ರಾಜ್ಯ ಮತ್ತು ಕೇಂದ್ರೀಯ ಪೊಲೀಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆದುಕೊಳ್ಳಲು ಆಸಕ್ತರಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯವು ₹2,50,000 ಅಥವಾ ಕಡಿಮೆ ಇರಬೇಕು. 12ನೇ ತರಗತಿ ಕಲಿಯುತ್ತಿರಬೇಕು ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 12ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವಷ್ಟು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದುಕೊಂಡಿರಬೇಕು (ಅಭ್ಯರ್ಥಿಯು ಎದುರಿಸಲು ಬಯಸುವ ಸ್ಪರ್ಧಾರ್ತ್ಮಕ ಪರೀಕ್ಷೆಯನ್ನು ಅವಲಂಬಿಸಿ) ಆದರೆ ಪ್ರಸ್ತುತ 12ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇ 50 ಅಂಕಗಳನ್ನು ಪಡೆದಿರಬೇಕು. ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಇತರ ಯಾವುದೇ ಯೋಜನೆಗಳಿಂದ ಈ ರೀತಿಯ ಪ್ರಯೋಜನಗಳನ್ನು (ಕೋಚಿಂಗ್ ತರಗತಿಗಳ) ಪಡೆದುಕೊಂಡಿರಬಾರದು.