ಉಳ್ಳಾಲ: ‘ಬ್ಯಾರಿ ಸಮುದಾಯದವರು ಶ್ರಮಜೀವಿಗಳು. ಗೌರವ, ಸ್ವಾಭಿಮಾನದಿಂದ ಬದುಕಿ ಬಾಳಿದವರು. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಅರ್ಥ ಮಾಡಿಕೊಂಡು ಹಿರಿಯರ ಕೊಡುಗೆ, ಮಾರ್ಗದರ್ಶನದ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಸಮ್ಮೇಳನದಿಂದ ನಡೆಯಬೇಕು’ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮೇಲ್ತೆನೆ ದೇರಳಕಟ್ಟೆ ಸಹಯೋಗದೊಂದಿಗೆ ಮಂಗಳವಾರ ಮುಡಿಪು ನಂದರಪದವಿನ ಎಸ್.ಕೆ.ಸಭಾಂಗಣದಲ್ಲಿ ನಡೆದ ತಾಲ್ಲೂಕು 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ, ತುಳು, ಕೊಂಕಣಿ ಭಾಷೆಗಳು ಲಿಪಿ ಬಳಕೆ ಇಲ್ಲದೆ ಸಾವಿರಾರು ವರ್ಷದಿಂದ ಮೌಖಿಕವಾಗಿಯೇ ಉಳಿದು–ಬೆಳೆದುಕೊಂಡು ಬಂದಿರುವುದು ವಿಶೇಷ. ಬ್ಯಾರಿ ಕೇವಲ ಭಾಷೆಯಾಗಿ ಉಳಿಯದೆ ಬ್ಯಾರಿ ಜನಾಂಗದ ಸಂಸ್ಕೃತಿ, ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಬ್ಯಾರಿ ಭವನ ನಿರ್ಮಾಣಕ್ಕೆ ಎದುರಾಗಿದ್ದ ತಾಂತ್ರಿಕ ತೊಡಕುಗಳು ನಿವಾರಣೆಯಾಗಿ ಶೀಘ್ರ ಭವನ ನಿರ್ಮಾಣವಾಗಲಿದೆ ಎಂದರು.

ನಾವು ಕೋಮುವಾದಿಗಳಾಗದೆ ಸಾಮಾಜಿಕ ಕಳಕಳಿ, ಸಮಾಜ ಸೇವೆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಸಂಪತ್ತನ್ನಾಗಿ ರೂಪಿಸಬೇಕು. ಸೌಹಾರ್ದದ, ಸಾಮರಸ್ಯದ ಸಮಾಜ ಕಟ್ಟುವ ರಾಯಭಾರಿಗಳಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಕೆ., ಉಳ್ಳಾಲ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ತಾಲ್ಲೂಕು ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ, ಮುಡಿಪು ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವಿ.ಇಬ್ರಾಹಿಂ ನಡುಪದವು, ಕಾರ್ಯದರ್ಶಿ ಹಂಝ ಮಲಾರ್, ಕಾರ್ಯಾಧ್ಯಕ್ಷ ಅಲಿಕುಂಞ ಪಾರೆ, ಗೌರವ ಕಾರ್ಯದರ್ಶಿ ಎನ್.ಎಸ್. ನಾಸೀರ್ ನಡುಪದವು, ಮಹಿಳಾ ಘಟಕದ ಸಂಚಾಲಕಿ ಸಿಹಾನ ಬಿ.ಎಂ., ಅಕಾಡೆಮಿ ಸದಸ್ಯರಾದ ಬಿ.ಎಸ್. ಮಹಮ್ಮದ್, ಶರೀಫ್ ಬಾಳಿಲ, ಸಾರಾ ಅಲಿ ಪರ್ಲಡ್ಕ, ಶಮೀರಾ ಜಹಾನ್, ಪ್ರಧಾನ ಕಾರ್ಯದರ್ಶಿ ಹಂಝ ಭಾಗವಹಿಸಿದ್ದರು.

ಝುಲೇಖ ಮುಮ್ರಾಜ್ ಅವರ ‘ನಿಲಾವು’ (ಲೇಖನಗಳ ಸಂಕಲನ), ಆಯಿಷಾ ಯು.ಕೆ.ಸಂಪಾದಕತ್ವದ ‘ಹಸ್ರತ್’ (ಕವನ ಸಂಕಲನ) ಬ್ಯಾರಿ ಕೃತಿಗಳನ್ನು ಯು.ಟಿ.ಖಾದರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಮುನ್ನ ಹೂಹಾಕುವಕಲ್ಲು ಜಂಕ್ಷನ್ನಿಂದ ಸಮ್ಮೇಳನ ಸಭಾಂಗಣದವರೆಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಸ್.ಕೆ.ಅಬ್ದುಲ್ ಖಾದರ್ ಉದ್ಘಾಟಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್.ಧ್ವಜಾರೋಹಣ ನೆರವೇರಿಸಿದರು.

ಚರ್ಚಾಗೋಷ್ಠಿ, ಕವಿಗೋಷ್ಠಿ, ಮೆಹೆಂದಿ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಕನ್ನಡದಿಂದ ಬ್ಯಾರಿ ಭಾಷೆಗೆ ಅನುವಾದ ಸ್ಪರ್ಧೆ ನಡೆಯಿತು. ಸಾಧಕರಿಗೆ ಸನ್ಮಾನ, ಬ್ಯಾರಿ ನಾಟಕ ಪ್ರದರ್ಶನ ನಡೆಯಿತು.

ಮೇಲ್ತನೆ ಅಧ್ಯಕ್ಷ ಮಂಗಳೂರ ರಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಹಮೀದ್ ಹಸನ್ ಮಾಡೂರು ವಂದಿಸಿದರು. ಅಕಾಡೆಮಿ ಸದಸ್ಯ ಯು.ಎಚ್. ಖಾಲಿದ್ ಉಜಿರೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-29-1277676634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.