ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಚಿಣ್ಣರ ಕಲರವ ಮತ್ತೆ ಶುರುವಾಯಿತು. ಬಾಳೆದಿಂಡು, ತಳಿರು ತೋರಣಗಳನ್ನು ಕಟ್ಟಿ, ಬಣ್ಣದ ಪತಾಕೆಗಳಿಂದ ಶಾಲೆಯ ಆವರಣವನ್ನು ಹಾಗೂ ಕೊಠಡಿಗಳನ್ನು ಸಿಂಗರಿಸಿ ವಿದ್ಯಾರ್ಥಿಗಳನ್ನು ಸಡಗರದಿಂದ ಶಾಲೆಗೆ ಸೋಮವಾರ ಬರಮಾಡಿಕೊಳ್ಳಲಾಯಿತು. ಶಾಲೆಗಳಲ್ಲಿ ಮನೆ ಮಾಡಿದ್ದ ಹಬ್ಬದ ವಾತಾವರಣದಲ್ಲಿ 2026–27ನೇ ಸಾಲಿನಶೈಕ್ಷಣಿಕ ಚಟುವಟಿಕೆ ಶುಭಾರಂಭಗೊಂಡಿತು.

ಕೆಲವು ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಟಿಪ್ಪಣಿ ಪುಸ್ತಕ, ಪಠ್ಯ ಸಾಮಗ್ರಿ, ಬ್ಯಾಗ್, ಕೊಡೆಗಳನ್ನು ವಿತರಿಸಲಾಯಿತು.

ಕೆಲವು ಸಂಘ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು, ಶಾಲೆಯ ಹಳೆ ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ಒದಗಿಸಿದವು. ನಾಲ್ಯಪದವು ಶಾಲೆಯಲ್ಲಿ ಸಾರ್ವಜನಿಕರು ದೇಣಿಗೆ ರೂಪದಲ್ಲಿ ನೀಡಿದ ಸಾಮಗ್ರಿಗಳ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಬಿಕರ್ನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೋಯ್ ಆಲುಕ್ಕಾಸ್ ಸಂಸ್ಥೆಯವರು ನಾಲ್ಕನೇ ತರಗತಿವರೆಗಿನ ಚಿಣ್ಣರಿಗೆ ಉಚಿತವಾಗಿ ಬ್ಯಾಗ್, ಕೊಡೆ, ಹಾಗೂ ಪುಸ್ತಕಗಳನ್ನು ವಿತರಿಸಿದರು. ಶಾಲಾ ಮುಖ್ಯಶಿಕ್ಷಕಿ ರಾಜೀವಿ, ಎಸ್ಡಿಎಂಸಿ ಅಧ್ಯಕ್ಷೆ ಸಂಧ್ಯಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೈಲಜಾ ಸುರೇಶ್, ಹಳೆ ವಿದ್ಯಾರ್ಥಿ ಗಿರೀಶ್ ಕೊಟ್ಟಾರಿ ಮೊದಲಾದವರು ಭಾಗವಹಿಸಿದ್ದರು

ಕುಂಜತ್ತಬೈಲ್ ಉತ್ತರ ವಾರ್ಡ್ನ ಮರಕಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟ್ಹಿನೊ ಉದ್ಘಾಟಿಸಿದರು.

ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಕಾಲೇಜಿನ ಉಪನ್ಯಾಸಕರಾದ ಪೀತಾಂಬರ್ ಪ್ರಾಸ್ತಾವಿಸಿದರು. ಪಾಲಿಕೆಯ ನಿಕಟಪೂರ್ವ ಸದಸ್ಯ ಶರತ್ ಕುಮಾರ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಮೊದಲಾದವರು ಭಾಗವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-29-765147827

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.