ದಾಂಡೇಲಿ: ‘ಸೇವಾ ಶಿಬಿರದಿಂದ ವ್ಯಕ್ತಿ ಪರಿಪೂರ್ಣವಾಗಿ ಬೆಳೆಯಲು ಸಾಧ್ಯ. ರಾಷ್ಟ್ರೀಯ ಚಿಂತನೆ ಅತೀ ಅಗತ್ಯ, ಮಾಡುವ ಕೆಲಸದಲ್ಲಿ ನಿಷ್ಠೆ ಇದ್ದರೆ ಯಶಸ್ಸು ಸಾಧ್ಯ. ಬುಡಕಟ್ಟು ಜನಾಂಗದ ಅಧ್ಯಯನದಿಂದ ಸಮುದಾಯಕ್ಕೆ ನಾನೇನು ಮಾಡಬಲ್ಲೆ ಎಂದು ಯೋಚಿಸುವುದು ನಿಜವಾದ ಅಧ್ಯಯನದ ಉದ್ದೇಶ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಪದವಿ ಮಹಾವಿದ್ಯಾಲಯದಿಂದ ತಾಲ್ಲೂಕಿನ ಗರಡೊಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಮತ್ತು ಸಿದ್ಧಿ ಬುಡಕಟ್ಟು ಜನರ ಜೀವನ ಮತ್ತು ಸಂಸ್ಕೃತಿಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಬಿ.ಎಲ್. ಗುಂಡೂರ ಮಾತನಾಡಿ, ‘ಸಿದ್ಧಿ ಸಮುದಾಯದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ’ ಎಂದರು.

ಕವಿವಿ ಕುಲಪತಿ ಎ.ಎಂ. ಖಾನ್, ‘ನಾಯಕತ್ವದ ಶಿಬಿರದ ದಿನಗಳನ್ನು ಅನುಭವಿಸಿ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ’ ಎಂದರು.

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಡಿಜೆಎಂ ರಾಘವೇಂದ್ರ ಜೆ.ಆರ್., ಕೆಸರೂಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸ್ತ್ಯಾಂವ್ ದಿಯೋಗ್, ಸಾಮಾಜಿಕ ಕಾರ್ಯಕರ್ತೆ ಶಜುಲಿಯಾನಾ ಫರ್ನಾಂಡಿಸ್, ರೋಟರಿ ಸದಸ್ಯ ರಾಹುಲ್ ಬಾವಾಜಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಲಕ್ಷ್ಮಿ ಸಿದ್ಧಿ ಇದ್ದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ 140 ಶಿಬಿರಾರ್ಥಿಗಳು ಇದ್ದರು. ಕವಿವಿ ಎನ್.ಎಸ್ಎಸ್ ಸಂಯೋಜನಾಧಿಕಾರಿ ಎಂ.ಬಿ. ದಳಪತಿ, ಕಾಲೇಜಿನ ಉಪನ್ಯಾಸಕ ಎಸ್.ಎಸ್. ಹಿರೇಮಠ ಮಾತನಾಡಿದರು. ಹರ್ಷಿತಾ ನಾಯಕ. ಉಪನ್ಯಾಸಕರಾದ ವಾಗೀಶ ರೇಶ್ಮಿ. ಲಕ್ಷ್ಮಿ ಪರಬ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-20-285748782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.