ದಾಂಡೇಲಿ: ನಗರದ ರೋಟರಿ ಕ್ಲಬ್, ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯ, ಭಾರತೀಯ ದಂತ ವೈದ್ಯಕೀಯ ಸಂಘ ಉತ್ತರ ಕನ್ನಡ ಶಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ದಂತ ಉಚಿತ ತಪಾಸಣೆ ಶಿಬಿರ ನಡೆಯಿತು.

ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ ರಾಯ ಮಾತನಾಡಿ, ಆರೋಗ್ಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ರೋಟರಿ ಕ್ಲಬ್ ನಿರಂತರವಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮಹತ್ವಕಾಂಕ್ಷೆಯನ್ನು ರೋಟರಿ ಕ್ಲಬ್ ಹೊಂದಿದೆ ಎಂದರು.

ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ವೈದ್ಯೆ ಡಾ.ಪ್ರೀತಾ ಶೆಟ್ಟಿ ಮಾತನಾಡಿ, ನಮ್ಮೆಲ್ಲರ ಆರೋಗ್ಯ ರಕ್ಷಣೆಯಲ್ಲಿ ಹಲ್ಲುಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹಲ್ಲುಗಳ ರಕ್ಷಣೆಯ ಕುರಿತಂತೆ ಜಾಗೃತಿ ವಹಿಸಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಡಾ.ಜುಲ್ಫಿನ್ ಶೇಖ, ಭಾರತೀಯ ದಂತ ವೈದ್ಯಕೀಯ ಸಂಘ ಉತ್ತರ ಕನ್ನಡ ಶಾಖೆಯ ಅಧ್ಯಕ್ಷ ಡಾ.ಎಸ್.ಎನ್.ದಫೇದಾರ ಇದ್ದರು

ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಲಿಯೋ ಪಿಂಟೋ, ಇವೆಂಟ್ ಮುಖ್ಯಸ್ಥ ಡಾ.ಅನೂಪ್ ಮಾಡ್ದೋಳ್ಳರ, ರೋಟರಿ ಕ್ಲಬ್ ನ ಎಸ್.ಜಿ.ಬಿರಾದಾರ, ಎಸ್.ಪ್ರಕಾಶ ಶೆಟ್ಟಿ ಸುಧಾಕರ ಶೆಟ್ಟಿ, ರಾಹುಲ್ ಬಾವಾಜಿ, ಆರ್.ಪಿ.ನಾಯ್ಕ, ಪ್ರಕಾಶ ಕಣಿಮೆಹಳ್ಳಿ, ಶೇಖರ ಪೂಜಾರಿ, ಇನ್ನರ್ ವೀಲ್ ಕ್ಲಬ್ ಪ್ರಮುಖರಾದ ಡಾ.ಜ್ಯೋತಿ ಮೋಹನ ಪಾಟೀಲ್, ಡಾ.ಅನೂಷಾ ಅನೂಪ್ ಮಾಡ್ದೋಳ್ಕರ ಇದ್ದರು.

ಅಶುತೋಷ್ ಕುಮಾರ್ ರಾಯ್ ಸ್ವಾಗತಿಸಿದರು. ಎಸ್.ಪ್ರಕಾಶ್ ಶೆಟ್ಟಿ ನಿರೂಪಿಸಿದರು. ಮಿಥುನ್ ನಾಯಕ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-20-473993343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.