ದಾಂಡೇಲಿ: ‘ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ಶಿಬಿರ ಸಹಕಾರಿ ಆಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಅರವಿಂದ ಮೂಲಿಮನಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ರಾಷ್ಟ್ರೀಯ ಸೇವಾ ಯೋಜನಾ ಕೋಶ, ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಪದವಿ ಮಹಾವಿದ್ಯಾಲಯ, ಎನ್ ಎಸ್ ಎಸ್ ಘಟಕ ಮತ್ತು ಮಾನವ ಹಕ್ಕುಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಗರಡೊಳ್ಳಿಯಲ್ಲಿ ಭಾನುವಾರ ನಡೆದ ವಿಶ್ವವಿದ್ಯಾಲಯ ಮಟ್ಟದ ಎನ್ಎಸ್ಎಸ್ ನಾಯಕತ್ವ ತರಬೇತಿ ಮತ್ತು ಸಿದ್ದಿ ಬುಡಕಟ್ಟು ಜನರ ಜೀವನ ಮತ್ತು ಸಂಸ್ಕೃತಿಯ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರದಲ್ಲಿ ಕಲಿತ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ದೇಶದ ಪ್ರಜ್ಞಾವಂತ ನಾಗರಿಕಬೇಕು ಎಂದು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಎಂ.ಬಿ. ದಳಪತಿ, ಪತ್ರಕರ್ತರಾದ ಸಂದೇಶ ಎಸ್.ಜೈನ್ ಮತ್ತು ಪ್ರವೀಣ ಕುಮಾರ್ ಸುಲಾಖೆ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಎಲ್ಲರೂ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಬದುಕಿನಲ್ಲಿ ಬಂಗಾರದ ನೆನಪುಗಳೇ ಇಂದಿನ ಬದುಕಿನ ಬುನಾದಿಯಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಬಿ.ಎಲ್. ಗುಂಡೂರ ಶಿಬಿರದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ತಿಳಿಸಿದ ಅವರು, ಹಳ್ಳಿ ಬದುಕು ಬವಣೆಗಳನ್ನು ಹತ್ತಿರದಿಂದ ಕಂಡ ನೀವು ಇವರ ಜೀವನ ಸುಧಾರಣೆಗೆ ಹೊಸದನ್ನು ನೀಡುವ ವಿಚಾರ ಮಾಡಬೇಕು’ ಎಂದರು.

ಊರಿನ ಹಿರಿಯರಾದ ಹುಸೇನಾಬಿ ಮುಜಾವರ, ಬಸ್ತ್ಯಾಂವ್ ಸಿದ್ಧಿ, ಶಾಲೆ ಮುಖ್ಯಶಿಕ್ಷಕ ಸತೀಶ ಭಟ್, ನಾಗರಾಜ, ವಿಶ್ವಕರ್ಮ, ಜೂಲಿ ಯಾನ ಫರ್ನಾಂಡೀಸ್ ಇದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, 110 ವರ್ಷ ವಯಸ್ಸಿನ ಹುಸೇನಾಬಿ ಮುಜಾವರ ಹಾಗೂ ಗಣ್ಯರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಎನ್ಎಸ್ಎಸ್ ಯೋಜನಾಧಿಕಾರಿ ಲಕ್ಷ್ಮಿ ಪರಬ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಚಾರ್ಯ ಎಸ್.ಎಸ್.ಹಿರೇಮಠ ವಂದಿಸಿದರು. ವಾಗೀಶ್ ರೇಶ್ಮಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-290934099

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.