ಧರ್ಮಪುರ: ‘ಗಾಂಧೀಜಿ ತತ್ವಗಳು ಸಾರ್ವಕಾಲಿಕವಾಗಿದ್ದು, ಇಂದಿನ ಯುವ ಜನ ಅವುಗಳನ್ನು ಅರಿತು ಮುನ್ನಡೆಯಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಸಲಹೆ ನೀಡಿದರು.

ಸಮೀಪದ ಹರಿಯಬ್ಬೆ ಘಟಕ ಕಾಲೇಜಿನಲ್ಲಿ ಸತ್ಯಶೋಧನೆ –100ರ ಅಂಗವಾಗಿ ದಾವಣಗೆರೆ ವಿಶ್ವವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹರಿಯಬ್ಬೆ ಘಟಕ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಗಾಂಧೀಜಿ ಬಹುಶಿಸ್ತೀಯ ನೋಟಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಗಾಂಧೀಜಿ ಚಿಂತನೆಗಳು ಬಹುಮುಖಿಯಾಗಿದ್ದು, ಯುವಕರಿಗೆ ಹೊಸ ದಿಕ್ಕು ತೋರಿಸಿವೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಗಾಂಧೀಜಿ ಆದರ್ಶಗಳು ಪ್ರಸ್ತುತವಾಗಿವೆ. ಅವರ ರಾಜಕೀಯ, ಆರ್ಥಿಕ, ಸಾಮಾಜಿಕ ಮೌಲ್ಯಗಳು ಸಮಾಜದ ಅಭ್ಯುದಯಕ್ಕೆ ಕಾರಣವಾಗಿವೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಗಾಂಧಿ ಸ್ಮಾರಕ ನಿಧಿಯ ಸದಸ್ಯರಾದ ಪ್ರೊ.ಡಿ.ಕೆ. ಚಿತ್ತಯ್ಯ ಪೂಜಾರ್ ತಿಳಿಸಿದರು.

‘ವಿದ್ಯಾರ್ಥಿಗಳ ಜೀವನ ಶೈಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿರಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಶಾರದಾ ಪಾಟೀಲ್ ಹೇಳಿದರು.

ಪ್ರೊ.ಎಂ. ಜಿ.ರಂಗಸ್ವಾಮಿ, ಪ್ರೊ. ಸತ್ಯಮಂಗಲ ಮಹಾದೇವ, ಪ್ರೊ. ಹಾ.ಮಾ.ನಾಗಾರ್ಜುನ, ಪ್ರೊ. ವಿಜಯಕುಮಾರ್ ಮಾತನಾಡಿದರು.

ಸಂಯೋಜನಾಧಿಕಾರಿ ಪ್ರೊ.ಎಚ್.ವಿ. ಶಾಂತರಾಜು, ಪ್ರಾಂಶುಪಾಲ ಕುಮಾರಯ್ಯ, ಗೋವಿಂದರಾಜು, ಗುರುಮೂರ್ತಿ, ಶಾರದಮ್ಮ ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-44-682619323

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.