ದಾವಣಗೆರೆ: ‘ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಬ್ಯಾಚುಲರ್ ಆಫ್ ವೊಕೇಷನ್ (B.Voc) ವೃತ್ತಿಪರ ಪದವಿ ಕೋರ್ಸ್ಗಳನ್ನು ಆರಂಭಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ವೃತ್ತಿಪರ ತರಬೇತಿ ಶಾಲೆಯ ನಿರ್ದೇಶಕ ಬಿ.ಆರ್. ಶ್ರೀಧರ್ ತಿಳಿಸಿದರು.

‘ಸಾಂಪ್ರದಾಯಿಕ ಪದವಿಗಳಿಗಿಂತ ಭಿನ್ನವಾಗಿ ಪ್ರಾಯೋಗಿಕ ತರಬೇತಿಗೆ ಈ ಕೋರ್ಸ್ಗಳಲ್ಲಿ ಆದ್ಯತೆ ನೀಡಲಾಗಿದೆ. ಉದ್ಯಮ ತಜ್ಞರ ಮಾರ್ಗದರ್ಶನದಲ್ಲಿ ರೂಪಿಸಲಾದ ಈ ಕೋರ್ಸ್ಗಳು ವಿದ್ಯಾರ್ಥಿಗಳನ್ನು ನೇರವಾಗಿ ಉದ್ಯೋಗಕ್ಕೆ ಸನ್ನದ್ಧಗೊಳಿಸುತ್ತವೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಎಲೆಕ್ಟ್ರಿಕಲ್ ವೆಹಿಕಲ್ ಟೆಕ್ನಾಲಜಿ, ಫ್ಯಾಷನ್ ಡಿಸೈನ್ ಮತ್ತು ಅಪ್ಯಾರಲ್ ಮ್ಯಾನ್ಯುಫ್ಯಾಕ್ಚರ್, ಡ್ರೋನ್ ಡೆವಲಪ್ಮೆಂಟ್ ಮತ್ತು ಅಪ್ಲಿಕೇಷನ್ಸ್, ಏರ್ಪೋರ್ಟ್ ಗ್ರೌಂಡ್ ಸರ್ವಿಸಸ್, ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್, ಅನಿಮೇಷನ್ ಮತ್ತು ವಿಷುವಲ್ ಎಫೆಕ್ಟ್ಸ್ ಎಂಬ ನೂತನ ಕೋರ್ಸ್ಗಳನ್ನು ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ಈಗಾಗಲೇ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಏಕಕಾಲದಲ್ಲಿ ಈ ಬಿ.ವೋಕ್ ಪದವಿಯನ್ನೂ ಪಡೆಯಬಹುದು. ಉದ್ಯೋಗದಲ್ಲಿರುವವರು ತಮ್ಮ ಕೌಶಲ ಹೆಚ್ಚಿಸಿಕೊಳ್ಳಲು ಸಂಜೆ ಮತ್ತು ವಾರಾಂತ್ಯದ ತರಗತಿಗಳ ಮೂಲಕ ಈ ಪದವಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 3 ವರ್ಷಗಳ ಕೋರ್ಸ್ ಇವಾಗಿವೆ’ ಎಂದು ಹೇಳಿದರು.

‘ದ್ವಿತೀಯ ಪಿಯುಸಿ (ಕಲೆ/ ವಾಣಿಜ್ಯ /ವಿಜ್ಞಾನ), ಐಟಿಐ ಮುಗಿಸಿರುವವರು ಈ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು ಈ ಕೋರ್ಸ್ಗಳನ್ನು ಆರಂಭಿಸಲು ಅಧಿಕೃತ ಅನುಮೋದನೆ ನೀಡಿದೆ’ ಎಂದರು.

ಮಾಹಿತಿಗೆ ದೂರವಾಣಿ ಸಂಖ್ಯೆ: 9449602419, 9900292125ಗೆ ಸಂಪರ್ಕಿಸಬಹುದು.

ಮಾರ್ಕೆಟಿಂಗ್ ಡೀನ್ ವೀರಗಂಗಾಧರ ಸ್ವಾಮಿ ಟಿ.ಎಂ., ಪ್ರೋಗ್ರಾಂ ಮ್ಯಾನೇಜರ್ಗಳಾದ ಪ್ರೊ. ಎಸ್.ಯು. ಸುರೇಶ್ ಬಾಬು, ಮೌನೇಶ್ ಡಿ. ಹಾಗೂ ದೀಕ್ಷಾ ಬಿ.ಬಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-43-1051568643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.