ದಾವಣಗೆರೆ: ‘ಹರ ಎಜುಕೇಷನಲ್ ಟ್ರಸ್ಟ್ನ ಡಾ. ಮಹಾಂತಸ್ವಾಮಿ ಪದವಿಪೂರ್ವ ಕಾಲೇಜಿಗೂ ಹರಿಹರದ ಪಂಚಮಸಾಲಿ ಪೀಠ ಅಥವಾ ವಚನಾನಂದ ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹರ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ಅಂದನೂರು ಆನಂದ್ ಕುಮಾರ್ ಹೇಳಿದರು.

‘ಹರ ಎಜುಕೇಷನಲ್ ಟ್ರಸ್ಟ್ 16 ಜನ ಸದಸ್ಯರನ್ನು ಹೊಂದಿದೆ. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಾ. ಮಹಾಂತಸ್ವಾಮಿ ಹೆಸರಿನಲ್ಲಿ ಕಾಲೇಜು ಆರಂಭಿಸಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಂಚಮಸಾಲಿ ಮಠದಿಂದ ಕಾಲೇಜಿಗೆ ಭೂಮಿಯಾಗಲೀ, ದೇಣಿಗೆಯಾಗಲೀ ಪಡೆದಿಲ್ಲ. ಕಾಲೇಜಿನಿಂದ ಹರ ಜಾತ್ರೆಗೆ ಬಸ್ಗಳನ್ನು ಕಳಿಸಿದ್ದೆವು. ಮಠದಿಂದ ಯಾವುದೇ ಪ್ರಯೋಜನ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿದ್ಯಾರ್ಥಿಗಳಿಗಾಗಿ ಎರಡು ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಟ್ರಸ್ಟಿನ ಎಲ್ಲಾ ಸದಸ್ಯರು ಪ್ರತಿ ತಿಂಗಳು ದೇಣಿಗೆ ನೀಡುತ್ತಾ ಬರುತ್ತಿದ್ದು, ಟ್ರಸ್ಟಿನ ವತಿಯಿಂದ ಆಡಿಟ್ ವರದಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದೇವೆ’ ಎಂದರು.

ಟ್ರಸ್ಟ್ ಸದಸ್ಯರಾದ ಎಸ್.ಕೆ. ಶ್ರೀಧರ್, ವಾಣಿ ಶಿವಣ್ಣ, ಎಂ.ದೊಡ್ಡಪ್ಪ, ಅಂದನೂರು ಮುರುಗೇಶಪ್ಪ, ಕೆ.ಎನ್. ರಾಜು ಕಡೆಕೊಪ್ಪ, ಬಾದಾಮಿ ಜಯಣ್ಣ, ಎಚ್.ಎಂ.ನಾಗರಾಜ್, ಎಚ್.ಎಸ್. ಅವ್ವಣ್ಣಪ್ಪ, ಅಂದನೂರು ಕೆ.ರುದ್ರಮನಿ, ಕೆ.ಶಿವಕುಮಾರ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-43-890131504

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.