ದಾವಣಗೆರೆ: ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆ ಪ್ರೋತ್ಸಾಹಿಸಲು ‘ಐಡಿಯಾ ಲ್ಯಾಬ್’ ಸ್ಥಾಪಿಸಲಾಗಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಎಸ್.ಆರ್. ಶಂಕಪಾಲ್ ತಿಳಿಸಿದರು.

‘ಪದವಿ ಮುಗಿಸುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಉದ್ಯೋಗ ಅರಸುತ್ತಾರೆ. ಶೇ 30ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಹಾಗೂ ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಇಂತಹ ಪದವೀಧರರನ್ನು ಉದ್ಯಮಿಗಳನ್ನಾಗಿ ರೂಪಿಸಲು ಪ್ರಯೋಗಾಲಯ ಸಹಕಾರಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಹೊಸ ಪ್ರಯೋಗ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳು 4ನೇ ಸೆಮಿಸ್ಟರ್ನಲ್ಲಿದ್ದಾಗ ‘ಆಲೋಚನೆಗಳ ವಿನ್ಯಾಸ ಮತ್ತು ನಾವೀನ್ಯತೆ’ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗುತ್ತದೆ. ಆಲೋಚನೆಗಳನ್ನು ಹೇಗೆ ವಾಣಿಜ್ಯೀಕರಣಗೊಳಿಸಬೇಕು ಹಾಗೂ ಕಾರ್ಯರೂಪಕ್ಕೆ ತರಬೇಕು ಎಂಬುದರ ಕುರಿತು ಉದ್ಯಮ ಪರಿಣಿತರು, ವಿಶ್ವವಿದ್ಯಾಲಯದ ತಜ್ಞರು ತರಬೇತಿ ನೀಡಲಿದ್ದಾರೆ’ ಎಂದು ವಿವರಿಸಿದರು.

‘2,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಳ್ಳಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ತಂಡಗಳು ರೂಪಿಸುವ ಪರಿಕಲ್ಪನೆಗಳಲ್ಲಿ ಅತ್ಯುತ್ತಮವಾದವುಗಳನ್ನು ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೆಕ್ಯಾನಿಕಲ್ ವರ್ಕ್ಶಾಪ್, ಎಲೆಕ್ಟ್ರಾನಿಕ್ ವರ್ಕ್ ಶಾಪ್, ಕಂಪ್ಯೂಟರ್ ಹಾಗೂ ಡಿಸೈನ್ ಲ್ಯಾಬ್ಗಳು, ಪರಿಣಿತ ಮೆಂಟರ್ಗಳ ಮಾರ್ಗದರ್ಶನ ಸಿಗಲಿದೆ’ ಎಂದರು.

‘ವಿದ್ಯಾರ್ಥಿಗಳ ಹೆಸರಲ್ಲೇ ಕಂಪನಿ ನೋಂದಣಿ ಮಾಡಲು ವಿಶ್ವವಿದ್ಯಾಲಯ ನೆರವಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಎಐಸಿಟಿಇ ಮತ್ತು ಎಂಎಸ್ಎಂಇ ಇಲಾಖೆಗಳಿಂದ ಧನಸಹಾಯ ಲಭ್ಯವಿದೆ. ಈ ಪ್ರಯೋಗಾಲಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕ ಕೂಡ ಇದರ ಪ್ರಯೋಜನ ಪಡೆಯಬಹುದು’ ಎಂದರು.

ಸಹ ಉಪಕುಲಪತಿ ಎಂ. ವೇಣುಗೋಪಾಲರಾವ್, ಸ್ಕೂಲ್ ಆಫ್ ಎಂಜಿನಿಯರಿಂಗ್ನ ನಿರ್ದೇಶಕ ಜೆ. ಪ್ರವೀಣ್, ‘ಐಡಿಯಾ ಲಾಬ್’ ನಿರ್ದೇಶಕರಾದ ಸಿ.ವಿ. ಶ್ರೀನಿವಾಸ್, ಕೀರ್ತಿಪ್ರಸಾದ್, ಮಾರುಕಟ್ಟೆ ವಿಭಾಗದ ಡೀನ್ ಟಿ.ಎಂ. ವೀರ ಗಂಗಾಧರಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-43-590601631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.