ದಾವಣಗೆರೆ: ಯಶಸ್ಸಿನ ನಿಜವಾದ ಪಯಣ ಆರಂಭವಾಗುವುದು ಸಣ್ಣ ಕಲ್ಪನೆಯಿಂದ. ವಿಭಿನ್ನವಾಗಿ ಆಲೋಚಿಸಿ ಸೃಜನಶೀಲ ಪ್ರಯೋಗಗಳನ್ನು ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ‘ಜೊಹೊ’ ಕಾರ್ಪೊರೇಷನ್ ನಿರ್ದೇಶಕ ರಾಜೇಂದ್ರನ್ ದಂಡಪಾಣಿ ಸಲಹೆ ನೀಡಿದರು.

ಇಲ್ಲಿನ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ‘ಐಡಿಯಾ ಲ್ಯಾಬ್’ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೀನ್ಯತೆಯ ಹಾದಿಯಲ್ಲಿ ತಪ್ಪುಗಳು ಸಹಜ. ಹೊಸ ಆಲೋಚನೆಗಳನ್ನು ಪ್ರಯೋಗಕ್ಕೆ ಒಡ್ಡಿದಾಗ ತಪ್ಪುಗಳಾಗುತ್ತವೆ. ಆದರೆ, ಆ ತಪ್ಪುಗಳಿಂದ ಪಾಠ ಕಲಿತು ಮುನ್ನಡೆಯುವುದು ಮುಖ್ಯ. ತಪ್ಪಿನಿಂದ ದೊರಕುವ ಅನುಭವ ಮತ್ತು ಲಾಭವು, ಆ ತಪ್ಪಿನಿಂದಾದ ನಷ್ಟಕ್ಕಿಂತ ಹೆಚ್ಚು. ಯಶಸ್ಸಿಗೆ ಇದು ಮೆಟ್ಟಿಲಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ಆಲೋಚನೆಗಳನ್ನು ಹತ್ತಿಕ್ಕಬಾರದು. ಹೆಚ್ಚು ಆಲೋಚನೆಗಳು ಮೂಡಿದಷ್ಟೂ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಸಂಶೋಧನೆಗೆ ತಾಮ್ರ, ಬಿದಿರು ಸೇರಿದಂತೆ 1,500ಕ್ಕೂ ಹೆಚ್ಚು ವಿಭಿನ್ನ ವಸ್ತುಗಳನ್ನು ಪ್ರಯೋಗಿಸಿ ವಿಫಲರಾಗಿದ್ದರು. ಧೃತಿಗೆಡದ ಅವರು ಕೊನೆಗೆ ಟಂಗ್ಸ್ಟನ್ ಬಳಸಿ ಯಶಸ್ವಿಯಾದರು’ ಎಂದು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಎಫ್ಎಸ್ಐಡಿ ಇನ್ಕ್ಯುಬೇಷನ್ ವಿಭಾಗದ ಸಿ.ಎಸ್. ಮುರಳಿ, ‘ಉದ್ಯಮಶೀಲತೆ ಕೇವಲ ಗುರಿಯಲ್ಲ; ಅದೊಂದು ಸುದೀರ್ಘ ಪಯಣ. ಅದು 100 ಮೀಟರ್ ಓಟದ ಸ್ಪರ್ಧೆಯಲ್ಲ; ಮ್ಯಾರಾಥಾನ್’ ಎಂದರು.

‘ಇತ್ತೀಚಿನ ದಿನಗಳಲ್ಲಿ ಯುವಕರು ಯಶಸ್ಸಿನ ಕಥೆಗಳನ್ನು ನೋಡಿ ಪ್ರೇರಿತರಾಗುತ್ತಿದ್ದಾರೆ. ಉದ್ಯಮಕ್ಕೆ ಕಾಲಿಟ್ಟ ತಕ್ಷಣವೇ ಯಶಸ್ಸು ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಮೈಕ್ರೋಸಾಫ್ಟ್ ಮತ್ತು ಗೂಗಲ್ನಂತಹ ಜಾಗತಿಕ ಸಂಸ್ಥೆಗಳೇ ಇಂದಿನ ಹಂತಕ್ಕೆ ತಲುಪಲು ಕನಿಷ್ಠ 15 ವರ್ಷ ಶ್ರಮಿಸಿವೆ ಎಂಬುದನ್ನು ಮರೆಯಬಾರದು’ ಎಂದು ನೆನಪಿಸಿದರು.

‘ಆಲೋಚನೆಗಳು ಎಷ್ಟೇ ಅದ್ಭುತವಾಗಿದ್ದರೂ, ಅದಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರು ಹಣ ನೀಡಿ ಖರೀದಿಸಲು ಸಿದ್ಧರಿಲ್ಲದಿದ್ದರೆ ಆ ಉದ್ಯಮ ಯಶಸ್ವಿಯಾಗಲು ಸಾಧ್ಯವಿಲ್ಲ. ವಿಜ್ಞಾನದ ಸಂಶೋಧನೆಯನ್ನು ಪ್ರಯೋಗಾಲಯದಲ್ಲಿ ಮಾಡುವುದು ಸುಲಭ. ಆದರೆ, ಅದನ್ನು ಮಾರುಕಟ್ಟೆಗೆ ತಕ್ಕ ಉತ್ಪನ್ನವನ್ನಾಗಿ ರೂಪಿಸುವುದು ದೊಡ್ಡ ಸವಾಲು’ ಎಂದರು.

ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಎಸ್.ಆರ್. ಶಂಕಪಾಲ್, ಸಹ ಕುಲಪತಿ ಎಂ. ವೇಣುಗೋಪಾಲರಾವ್, ಕುಲಸಚಿವ ಸುನಿಲ್ ಕುಮಾರ್ ಬಿ.ಎಸ್., ಸ್ಕೂಲ್ ಆಫ್ ಎಂಜಿನಿಯರಿಂಗ್ನ ನಿರ್ದೇಶಕ ಪ್ರವೀಣ್ ಜೆ., ‘ಐಡಿಯಾ ಲ್ಯಾಬ್’ ನಿರ್ದೇಶಕರಾದ ಶ್ರೀನಿವಾಸ್ ಸಿ.ವಿ., ಕೀರ್ತಿ ಪ್ರಸಾದ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-43-476784248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.