ದಾವಣಗೆರೆ: ಪ್ರತಿಷ್ಠಿತ ಐಐಟಿ, ಎನ್ಐಟಿ, ಐಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪ್ರವೇಶಕ್ಕಾಗಿ 2026ರಲ್ಲಿ ನಡೆಸಲಾದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಲಸ್ವಾಮಿ ಡಿ.ಜೆ. ರಾಷ್ಟ್ರಮಟ್ಟದಲ್ಲಿ 128ನೇ ರ್ಯಾಂಕ್ ಗಳಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಪೃಥ್ವಿರಾಜ್ ಟಿ.ಎಲ್. 95.87 ಪರ್ಸೆಂಟೈಲ್, ಗಿರಿ ಎಂ.ಡಿ. 92.68 ಪರ್ಸೆಂಟೈಲ್, ಎಸ್. ಮಧುಶ್ರೀ 92.46 ಪರ್ಸೆಂಟೈಲ್, ಜೀವನ್ ಎಸ್.ಆರ್. 89.65 ಪರ್ಸೆಂಟೈಲ್, ಪ್ರಜ್ವಲ್ ಪಿ. 274 ನೇ ರ್ಯಾಂಕ್, ಅಮೂಲ್ಯ ಎಚ್.ವಿ. 445ನೇ ರ್ಯಾಂಕ್, ಭೂಮಿಕಾ ಜಿ. 457ನೇ ರ್ಯಾಂಕ್, ಪ್ರವೀಣ ಪಿ.ಆರ್. 787ನೇ ರ್ಯಾಂಕ್ ಪಡೆದಿದ್ದಾರೆ.

500ನೇ ರ್ಯಾಂಕ್ ಒಳಗೆ 4 ವಿದ್ಯಾರ್ಥಿಗಳು, 2000 ರ್ಯಾಂಕ್ ಒಳಗೆ 9 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮಾಗನೂರು ಬಸಪ್ಪ ಕಾಲೇಜಿನ ಒಟ್ಟು 20 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

‘ಮಧ್ಯ ಕರ್ನಾಟಕ ಭಾಗದಲ್ಲಿ ಪ್ರತೀ ವರ್ಷವೂ ರಾಷ್ಟ್ರದ ಪ್ರತಿಷ್ಠಿತ ಐಐಟಿ, ಎನ್ಐಟಿ, ಐಐಐಟಿ ಸಂಸ್ಥೆಗಳಿಗೆ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲು ಕಳುಹಿಸುತ್ತಿರುವ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜು ಪಾತ್ರವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಗಮೇಶ್ವರ ಗೌಡ, ನಿರ್ದೇಶಕ ಜಿ.ಎನ್.ಎಚ್.ಕುಮಾರ್, ಪ್ರಾಚಾರ್ಯ ಪ್ರಸಾದ್ ಬಂಗೇರ ಎಸ್. ಹಾಗೂ ಕಾಲೇಜಿನ ಬೋಧಕ– ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-43-1706086387

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.