ದಾವಣಗೆರೆ: ನಗರದ ಎಸ್.ಎಸ್.ಬಡಾವಣೆಯ ‘ಎ’ ಬ್ಲಾಕ್, 5ನೇ ಕ್ರಾಸ್ನಲ್ಲಿರುವ ವಿಶೇಷ ಮಕ್ಕಳ ಆಶಾಕಿರಣ ಟ್ರಸ್ಟ್ನ ಭಾವೈಕ್ಯತಾ ವಸತಿಯುತ ವಿಶೇಷ ಶಾಲೆಯಲ್ಲಿ 2026-27ನೇ ಸಾಲಿಗೆ ಬುದ್ಧಿಮಾಂದ್ಯ ಮಕ್ಕಳನ್ನು ಉಚಿತವಾಗಿ ಸೇರಿಸಿಕೊಳ್ಳಲಾಗುತ್ತದೆ ಎಂದು ಟ್ರಸ್ಟ್ನ ಕಾರ್ಯಾಧ್ಯಕ್ಷ ರಮಣ್ಲಾಲ್ ಪಿ. ಸಂಘವಿ ಮತ್ತು ಗೌರವ ಕಾರ್ಯದರ್ಶಿ ಪೊಪಟ್ ಲಾಲ್ ಜೈನ್ ತಿಳಿಸಿದ್ದಾರೆ.

ಶಾಲೆ ಉತ್ತಮವಾದ ಕಟ್ಟಡ, ಸುಶಿಕ್ಷಿತ ಶಿಕ್ಷಕರನ್ನು ಹೊಂದಿದ್ದು, 6 ರಿಂದ 23 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಉಚಿತ ವಸತಿ, ಸಮವಸ್ತ್ರ, ಊಟದ ವ್ಯವಸ್ಥೆ ಇದೆ. ವೈದ್ಯಕೀಯ ಸೇವೆ, ಭೌತಿಕ ವ್ಯಾಯಾಮ, ಯೋಗ ಮತ್ತು ವಿಶೇಷ ಕ್ರೀಡೆಗಳಿಗೆ ಅವಕಾಶವಿದೆ.

ಆಸಕ್ತ ಪೋಷಕರು ಮಗುವಿನ ಯುಡಿಐಡಿ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಫೋಟೊಗಳೊಂದಿಗೆ ಮಕ್ಕಳನ್ನು ಕರೆದುಕೊಂಡು ಬಂದು ಮೌಲ್ಯಮಾಪನ ಮಾಡಿಸಿ ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 08192 222822 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-43-831202795

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.