ದಾವಣಗೆರೆ: ‘ಯುಬಿಡಿಟಿ ಕಾಲೇಜು ನಮಗೆ ಎಂಜಿನಿಯರಿಂಗ್ ಶಿಕ್ಷಣವನ್ನಷ್ಟೇ ನೀಡಲಿಲ್ಲ, ವ್ಯಕ್ತಿತ್ವ ವಿಕಸನಕ್ಕೂ ಬಹುದೊಡ್ಡ ರೀತಿಯಲ್ಲಿ ನೆರವಾಗಿದೆ. ಓದು ಮುಗಿಸಿ ವೃತ್ತಿಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿ ಸ್ವತಂತ್ರವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಭದ್ರ ಬುನಾದಿ ಹಾಕಿದೆ’ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ (ಸಂಘಟನೆ) ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.

ನಗರದ ವಿಶ್ವವಿದ್ಯಾಲಯ ಬಿಡಿಟಿ ಕಾಲೇಜಿನ (ಯುಬಿಡಿಟಿ) ಅಮೃತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

‘ದಾವಣಗೆರೆ ಎಂದರೆ ದಾನಿಗಳ ಊರು. ತಮ್ಮ ಊರಿನ ಮಕ್ಕಳು ಎಂಜಿನಿಯರಿಂಗ್ ಶಿಕ್ಷಣ ಪಡೆಯಲೆಂಬ ದೂರದೃಷ್ಟಿಯಿಂದ 75 ವರ್ಷಗಳ ಹಿಂದೆಯೇ ಇಲ್ಲಿನ ದಾನಿಗಳು ಕಾಲೇಜು ಸ್ಥಾಪನೆಗೆ ಅಡಿಪಾಯ ಹಾಕಿದರು. ಕಾಲೇಜು ಸ್ಥಾಪನೆಯಲ್ಲಿ ಸರ್ಕಾರದ ಪಾತ್ರಕ್ಕಿಂತ ಹೆಚ್ಚಾಗಿ ದಾನಿಗಳು ನೆರವಾಗಿದ್ದರಿಂದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಓದಿ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು’ ಎಂದರು.

‘ತಂತ್ರಜ್ಞಾನದ ನಾಗಾಲೋಟದಲ್ಲಿ ಕಂಪ್ಯೂಟರ್, ಪಠ್ಯ ಸೇರಿದಂತೆ ಎಲ್ಲವೂ ನಿರಂತರವಾಗಿ ಬದಲಾಗುತ್ತಿವೆ. ತಂತ್ರಜ್ಞಾನದ ಹೊಸ ಅಂಶಗಳನ್ನು ಕಾಲಕಾಲಕ್ಕೆ ಅರಿತು ಅಳವಡಿಸಿಕೊಳ್ಳದಿದ್ದರೆ ಓದಿದ್ದು ಹಳತಾಗುತ್ತದೆ. ಇಂತಹ ಸನ್ನಿವೇಶದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಯೊಂದು 75 ವರ್ಷಗಳ ನಂತರವೂ ಪ್ರಸ್ತುತವಾಗಿರುವುದು ಹೆಮ್ಮೆಯ ವಿಚಾರ. ಕಾಲದ ಪರೀಕ್ಷೆಗೆ ಕಾಲೇಜು ತನ್ನನ್ನು ಒಡ್ಡಿಕೊಂಡು ಗೆದ್ದಿದೆ’ ಎಂದು ಶ್ಲಾಘಿಸಿದರು.

‘ಸರ್ಕಾರದ ಸುಪರ್ದಿಯಲ್ಲಿದ್ದಾಗ ‘ಜಿಬಿಡಿಟಿ’ ಎಂಬ ಹೆಸರಿತ್ತು. ವಿಶ್ವವಿದ್ಯಾಲಯದ ತೆಕ್ಕೆಗೆ ಸೇರಿದ ಬಳಿಕ ‘ಯುಬಿಡಿಟಿ’ ಎಂದಾಯಿತು. ಕಾಲೇಜಿನಲ್ಲಿ ಓದಿ ವೃತ್ತಿಯಲ್ಲಿ ಬಹುದೊಡ್ಡ ಎತ್ತರಕ್ಕೆ ಏರಿದ ಹಲವರಿದ್ದಾರೆ. ಇಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದ ನಾನು ಸಾಮಾಜಿಕ ಕ್ಷೇತ್ರಕ್ಕೆ ಹೊರಳಿಕೊಂಡೆ. ಆಗಿನ ಕಾಲಕ್ಕೆ ಹಾಸ್ಟೆಲ್ ಹೊಂದಿದ್ದ ಏಕೈಕ ಎಂಜಿನಿಯರಿಂಗ್ ಕಾಲೇಜು ಎಂದು ಯುಬಿಡಿಟಿ ಹೆಸರಾಗಿತ್ತು’ ಎಂದು ನೆನಪಿಸಿಕೊಂಡರು.

ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ವಿಡಿಯೊ ಸಂದೇಶವನ್ನು ಪ್ರಸಾರ ಮಾಡಲಾಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿ, ಮಾಜಿ ಸಂಸದ ಜನಾರ್ದನ ಸ್ವಾಮಿ, ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಂ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್. ವಿದ್ಯಾಶಂಕರ್, ನಿವೃತ್ತ ರಿಜಿಸ್ಟ್ರಾರ್ ಕೆ.ಎನ್. ವೆಂಕಟಕೃಷ್ಣ ರಾವ್, ಪ್ರಾಂಶುಪಾಲ ಡಿ.ಪಿ. ನಾಗರಾಜಪ್ಪ, ಕಾರ್ಯಕ್ರಮದ ಸಂಚಾಲಕ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-43-936756549

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.