ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

Last Updated 22 ಜನವರಿ 2023, 22:30 IST
ಅಕ್ಷರ ಗಾತ್ರ

ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ವಿವರ: 9 ಅಥವಾ 10ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುವುದಕ್ಕಾಗಿ ಡಿಬಿಎಸ್‌ ಬ್ಯಾಂಕ್‌ ಸ್ಕಾಲರ್‌ಶಿಪ್‌ ಪ್ರೊಗ್ರಾಂ ರೂಪಿಸಿದೆ. ಇದು ವಿಶೇಷವಾಗಿ ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿಯೇ ರೂಪಿಸಿರುವ ಕಾರ್ಯಕ್ರಮವಾಗಿದೆ.

ಅರ್ಹತೆ: ತಮಿಳುನಾಡು, ಕರ್ನಾಟ, ಕೇರಳ, ಆಂಧ್ರಪ್ರದೇಶ ಅಥವಾ ಪುದುಚೆರಿಯಲ್ಲಿ ನೆಲೆಸಿರುವ ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಅದಕ್ಕಿಂತ ಕೆಳಗಿನ ಶ್ರೇಣಿ) 9 ಅಥವಾ 10ನೇ ತರಗತಿಗೆ ದಾಖಲಾಗಿರುವ ಮಕ್ಕಳು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ವಾರ್ಷಿಕ ₹20 ಸಾವಿರ(ಮೂರು ವರ್ಷಗಳವರೆಗೆ)

ಅರ್ಜಿ ಸಲ್ಲಿಸಲು ಕೊನೆ ದಿನ: 5ನೇ ಫೆಬ್ರುವರಿ 2023

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/DBSDS11

============

ನಿಕಾನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2022

ಛಾಯಾಗ್ರಹಣ ಸಂಬಂಧಿತ ಕೋರ್ಸ್‌ ಕಲಿಯುತ್ತಿರುವ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವುದಕ್ಕಾಗಿ ನಿಕಾನ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆ ‘ನಿಕಾನ್‌ ಸ್ಕಾಲರ್‌ಶಿಪ್‌ ಪ್ರೊಗ್ರಾಂ– 2022‘ ರೂಪಿಸಿದೆ.

ಅರ್ಹತೆ: 12ನೇ ತರಗತಿ ಉತ್ತೀರ್ಣರಾಗಿರುವ, 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಛಾಯಾಗ್ರಹಣ ಕೋರ್ಸ್‌ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹6ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ₹1 ಲಕ್ಷದವರೆಗೆ

ಅರ್ಜಿ ಸಲ್ಲಿಕೆ ಕೊನೆ ದಿನ: 31–01–2023

ಅರ್ಜಿ ಸಲ್ಲಿಸುವ ವಿಧಾನ: ಆನ್‌ ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/NSP9

=========

ಕ್ರೆಡಿಟ್‌ ಸ್ವಿಸ್ ಸ್ಕಾಲರ್‌ಷಿಪ್ 2022

ಎಂಬಿಎ/ಎಂ(ಅರ್ಥಶಾಸ್ತ್ರ) ಪದವಿಗೆ ದಾಖಲಾಗಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡುವುದಕ್ಕಾಗಿ ‘ಕ್ರೆಡಿಟ್‌ ಸ್ವಿಸ್‌ ಸ್ಕಾಲರ್‌ಷಿಪ್‌ 2022‘ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಸಂಬಂಧ ಆಸಕ್ತ ವಿದ್ಯಾರ್ಥಿಗಳಿಂದ ‘ಬಡ್ಡಿ4ಸ್ಟಡಿ‘ ಸಂಸ್ಥೆಯು ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: ಅರ್ಜಿದಾರ ವಿದ್ಯಾರ್ಥಿಗಳು ದೇಶದಲ್ಲಿರುವ ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ ಅಥವಾ ಎಂಎ ನಲ್ಲಿ ಅರ್ಥಶಾಸ್ತ್ರ ಕೋರ್ಸ್‌ಗೆ ದಾಖಲಾಗಿರಬೇಕು. 12ನೇ ತರಗತಿಯಲ್ಲಿ ಶೇ 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷ ಮೀರಿರಬಾರದು(ಬಡ್ಡಿ4ಸ್ಟಡಿ ಮೂಲಕ ಪರಿಶೀಲನೆಗೆ ಒಳಪಟ್ಟಿರುತ್ತದೆ).

ಆರ್ಥಿಕ ನೆರವು: ಒಟ್ಟು ಶುಲ್ಕದ ಶೇ 80ವರೆಗೆ ಅಥವಾ ₹ 2 ಲಕ್ಷ , ಯಾವುದು ಕಡಿಮೆಯೋ ಅದು.

ಅರ್ಜಿ ಸಲ್ಲಿಸಲು ಕೊನೆ ದಿನ: 31-01-2023

ಅರ್ಜಿ ಸಲ್ಲಿಸುವ ವಿಧಾನ: ಆನ್‌ ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/CSE4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT