ನವದೆಹಲಿ (ಪಿಟಿಐ): ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ, ಎನ್ಎಸ್ಯುಐ ಶಾಸ್ತ್ರಿ ಭವನದ ಹೊರಗೆ ಮಂಗಳವಾರ ಪ್ರತಿಭಟನೆ ನಡೆಸಿತು.

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುಐ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ‘ಪ್ರಧಾನಿ ರಾಜಿ ಮಾಡಿಕೊಂಡರು, ಪ್ರಶ್ನೆ ಪತ್ರಿಕೆಯಲ್ಲಿ ರಾಜಿಯಾಗಿದೆ’, ‘ಪತ್ರಿಕೆ ಸೋರಿಕೆ, ಮೋದಿ ಸರ್ಕಾರ ದುರ್ಬಲ’ ಮತ್ತು ‘ವೈದ್ಯರ ಪದವಿ ಮಾರಾಟಕ್ಕಿದೆ’ ಎಂಬ ಫಲಕ ಹಿಡಿದು ಪ್ರತಿಭಟಿಸಿದರು.

ಶಾಸ್ತ್ರಿ ಭವನದ ಹೊರಗೆ ಭಾರೀ ಬ್ಯಾರಿಕೇಡ್ಗಳು ಮತ್ತು ಪೊಲೀಸರ ಭದ್ರತೆಯ ನಡುವೆಯೂ ಪ್ರತಿಭಟನಕಾರರು, ‘ವಿದ್ಯಾರ್ಥಿಗಳ ಮೇಲಿನ ದಬ್ಬಾಳಿಕೆ ನಿಲ್ಲಿಸಿ’ ಎಂಬ ಘೋಷಣೆಗಳನ್ನು ಕೂಗಿದರು.

‘ನೀಟ್ ಪರೀಕ್ಷಾ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ಮತ್ತು ಲೋಪಗಳು ನಡೆದಿವೆ ಎಂಬುದು ಪರೀಕ್ಷೆಯ ರದ್ದತಿಯೇ ಸಾಬೀತುಪಡಿಸುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಪದೇ ಪದೇ ವಿಫಲವಾಗುತ್ತಿದೆ’ ಎಂದು ಎನ್ಎಸ್ಯುಐ ಆರೋಪಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1298676995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.