ದೇವದುರ್ಗ: ಪಟ್ಟಣದ ಪಾಟೀಲ ಓಣಿ ವಾರ್ಡ್ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಹಾಗೂ ಉರ್ದು ಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸ ವವನ್ನು ಸೋಮವಾರ ಆಚರಿಸಲಾಯಿತು.

ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಾಬಯ್ಯ ಮುಖ್ಯ ಶಿಕ್ಷಕ ಶಾಂತಿಗೌಡ ನಾಗರಾಳ ಮತ್ತು ಸಹ ಶಿಕ್ಷಕರು ವಿದ್ಯಾರ್ಥಿಗಳನ್ನು ಪುಷ್ಪ ನೀಡಿ ಸ್ವಾಗತಿಸಿದರು.

‘ಶಾಲೆಯಲ್ಲಿ ಸರಸ್ವತಿ ಪೂಜೆಯನ್ನು ಮಾಡಲಾಯಿತು. ಶಾಲೆಯ ಮೊದಲ ದಿನಕ್ಕೆ ಮಕ್ಕಳು ಸಂಭ್ರಮಪಟ್ಟರು. ಶಾಲಾ ಆವರಣ ಮಧುವಣಗಿತ್ತಿಯಂತೆ ತಯಾರಾಗಿ ತ್ತು.

ಕಸಾಪ ಅಧ್ಯಕ್ಷ ಎಚ್. ಶಿವರಾಜ, ಮಾಜಿ ಪುರಸಭೆ ಸದಸ್ಯ ನಾಗರಾಜ ಗೋಗಿ, ಎಸ್ಡಿಎಂಸಿ ಉಪಾಧ್ಯಕ್ಷೆ ತಾಯಮ್ಮ, ಸದಸ್ಯರಾದ ಶಿವಾಜಿ, ರಮೇಶ, ಬಸಪ್ಪ, ಮಲ್ಲಮ್ಮ, ರೇಷ್ಮಾ, ಮಹಾಮುನಿ, ಶಂಕರನಾಗ, ಶಿಕ್ಷಣ ಸಂಯೋಜಕ ಬಾಬು ಹಡಗಲಿ, ಸವಿತಾ, ನಾಗರತ್ನ, –ಪವಿತ್ರಾ, ದೈಹಿಕ ಶಿಕ್ಷಣ ಶಿಕ್ಷಕ ಲಾಲ್ ಸಾಬ್, ಪೋಷಕರು, ಶಿಕ್ಷಣ ಪ್ರೇಮಿಗಳು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-32-522190073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.