ದೇವದುರ್ಗ: ‘ಕಾಲ ಕಾಲಕ್ಕೆ ಚಿಕಿತ್ಸೆ ಪಡೆದು ಪೌಷ್ಟಿಕ ಆಹಾರ ಸೇವಿಸಿದರೆ, ನಿಧಾನವಾಗಿ ಕ್ಷಯರೋಗ ಗುಣಮುಖವಾಗುತ್ತದೆ’ ಎಂದು ಕ್ಷಯ ಮೇಲ್ವಿಚಾರಕ ರವಿ ಶುಕ್ಲಾ ಹೇಳಿದರು.

ಅರಕೇರಾ ತಾಲ್ಲೂಕಿನ ಎನ್.ಗಣೇಕಲ್ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ 100 ದಿನ ಕ್ಷಯರೋಗ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕ್ಷಯರೋಗ ಎನ್ನುವುದು ಮೈಕ್ರೋ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಒಂದು ಆರೋಗ್ಯ ಸಮಸ್ಯೆ. ವಾತಾವರಣದಲ್ಲಿ ಇರುವ ಮಾಲಿನ್ಯ, ಶ್ವಾಸಕೊಶದ ದೌರ್ಬಲ್ಯ ಹಾಗೂ ಶ್ವಾಸಕೋಶದ ಸೋಂಕಿನಿಂದ ಕಾಣಿಸಿಕೊಳ್ಳುತ್ತದೆ’ ಎಂದರು.

‘ತೀವ್ರವಾದ ಕೆಮ್ಮು ಈ ರೋಗದ ಪ್ರಮುಖ ಲಕ್ಷಣವಾಗಿದೆ. ಮೂರು ವಾರ ಅಥವಾ ಅದಕ್ಕಿಂತ ಹೆಚ್ಚು ಕೆಮ್ಮು ಮುಂದುವರಿಯುವ ಸಾಧ್ಯತೆಗಳಿರುತ್ತವೆ. ರಕ್ತದಿಂದ ಕೂಡಿರುವ ಅಥವಾ ಬೇರೆ ಬೇರೆ ಬಣ್ಣದಲ್ಲಿ ಇರುವ ಕಫ, ಜ್ವರ, ಆಯಾಸ, ಎದೆ ನೋವು, ಉಸಿರಾಟದ ತೊಂದರೆ, ಹಸಿವಾಗದೆ ಇರುವುದು ಹೀಗೆ ಕೆಲವು ಪ್ರಮುಖ ಲಕ್ಷಣ ಕಾಣಿಸಿಕೊಳ್ಳುತ್ತವೆ’ ಎಂದು ಹೇಳಿದರು.

‘ಒಮ್ಮೆ ಈ ಆರೋಗ್ಯ ಸಮಸ್ಯೆ ಉಂಟಾದರೆ, ಇದಕ್ಕೆ 6-9 ತಿಂಗಳು ಚಿಕಿತ್ಸೆ ನೀಡಬೇಕಾಗುತ್ತದೆ. ನಂತರದ ಅವಧಿಯಲ್ಲಿ ನಿಧಾನವಾಗಿ ಕ್ಷಯರೋಗವು ಗುಣಮುಖವಾಗುತ್ತದೆ. ಕ್ಷಯರೋಗ ಪೀಡಿತ ರೋಗಿಗಳಿಗೆ ಪೌಷ್ಟಿಕ ಆಹಾರ ಸೇವನೆಗೆ ಸರ್ಕಾರ ಪ್ರತಿ ತಿಂಗಳು ₹1,000 ಸಹಾಯಧನ ನೀಡುತ್ತಿದ್ದು, ಇದರ ಸದುಪಯೋಗ ಪಡೆದು ಗುಣಮುಖರಾಗಬೇಕು’ ಎಂದು ತಿಳಿಸಿದರು. ಶಿಬಿರದಲ್ಲಿ 14 ಜನರ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಯಿತು. 126 ಜನರಿಗೆ ಆರೋಗ್ಯ ತಪಾಸಣೆ ಮಾಡಿ ಎಕ್ಸ್ ರೇ ಮಾಡಲಾಯಿತು.

ಮೇಲ್ವಿಚಾರಕ ಭೀಮೇಶ, ಮಹೇಶ ನಾಯಕ, ಸಮುದಾಯ ಆರೋಗ್ಯ ಅಧಿಕಾರಿ ಹರೀಶ, ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷಾತಾಧಿಕಾರಿ ಸುಧಾರಾಣಿ, ಆಶಾ ಕಾರ್ಯಕರ್ತೆ ಕಮಲಮ್ಮ, ವಿಜಯಲಕ್ಷ್ಮಿ, ಪವಿತ್ರಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-32-2123908418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.