ದೇವನಹಳ್ಳಿ: ಇಲ್ಲಿನ ಅಮಿಟಿ ವಿ.ವಿಯಲ್ಲಿ ಈಚೆಗೆ ನಡೆದ ‘ಅಮಿಗ್ಲೋರಿಯಾ–2026’ ಸಾಂಸ್ಕೃತಿಕ ಮಹೋತ್ಸವ ಎರಡು ದಿನಗಳ ಕಾಲ ವೈಭವದಿಂದ ಜರುಗಿತು. ವಿದ್ಯಾರ್ಥಿಗಳ ಕಲೆ, ಪ್ರತಿಭೆ ಹಾಗೂ ಸೃಜನಶೀಲತೆ ಅನಾವರಣಕ್ಕೆ ವೇದಿಕೆಯಾಯಿತು. ಈ ಮಹೋತ್ಸವದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮ ಹೆಚ್ಚಿಸಿದರು.

ನೃತ್ಯ, ಸಂಗೀತ ಹಾಗೂ ಸೃಜನಾತ್ಮಕ ಸ್ಪರ್ಧೆಗಳು ಪ್ರೇಕ್ಷಕರನ್ನು ರಂಜಿಸಿತು. ‘ರಿದ್ಮಿಕ್ ರಂಬಲ್’ ಮತ್ತು ‘ಫೋಕ್ ಫೀಟ್ ಫಿಯೆಸ್ಟಾ’ ನೃತ್ಯ ಪ್ರದರ್ಶನ ಗಮನ ಸೆಳೆದರೆ, ‘ಕ್ಲ್ಯಾಶ್ ಆಫ್ ಕಾರ್ಡ್ಸ್’ ಹಾಗೂ ‘ಎಕೋ ವರ್ಸ್’ ಸಂಗೀತ ಕಾರ್ಯಕ್ರಮ ಮೆಚ್ಚುಗೆ ಗಳಿಸಿತು.

ಚಿತ್ರಕಲೆ, ಛಾಯಾಗ್ರಹಣ, ಕಥೆ ಹೇಳುವಿಕೆ ಮತ್ತು ಹೊಸ ಆಲೋಚನೆಗಳಿಗೆ ವೇದಿಕೆಯಾದ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕಿದವು. ದಿನಾಂತ್ಯದಲ್ಲಿ ಸ್ವರಾಹ ಮ್ಯೂಸಿಕ್ ಬ್ಯಾಂಡ್ನ ನೇರ ಸಂಗೀತ ಕಾರ್ಯಕ್ರಮ ಉತ್ಸಾಹ ಹೆಚ್ಚಿಸಿತು.

ಫ್ಯಾಷನ್ ಶೋ ‘ಏಥರ್ ವರ್ಟೆಕ್ಸ್’, ಶಾಸ್ತ್ರೀಯ ನೃತ್ಯ ‘ತಾಳ ತರಂಗ’ ಹಾಗೂ ವಾದ-ವಿವಾದ ಸ್ಪರ್ಧೆಗಳು ಗಮನ ಸೆಳೆದವು. ‘ಬ್ರೈನ್ವೇವ್ ಅರೆನಾ’ ಮತ್ತು ‘ಕ್ಲ್ಯಾಶ್ ಆಫ್ ಮೈಂಡ್ಸ್’ ಸ್ಪರ್ಧೆಗಳು ವಿದ್ಯಾರ್ಥಿಗಳ ಚಾತುರ್ಯವನ್ನು ಹೊರಹಾಕಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-15-2071350680

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.