ಗದಗ: ‘ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯುವಜನತೆ ಮತ್ತು ಮಹಿಳೆಯರ ಪಾತ್ರ ನಿರ್ಣಾಯಕವಾಗಿದೆ. ಪ್ರಸ್ತುತ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ವಿಕಸಿತ ಭಾರತದ ಕನಸನ್ನು ನನಸು ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ’ ಎಂದು ಪುಣೆಯ ಗೋಖಲೆ ಸಂಸ್ಥೆಯ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್. ಹರಿ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಸಮಾಜ ವಿಜ್ಞಾನ, ವಾಣಿಜ್ಯ ಹಾಗೂ ದೈಹಿಕ ಶಿಕ್ಷಣ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾಮಾಜಿಕ ವಿಜ್ಞಾನಗಳಲ್ಲಿ ಸಮಕಾಲೀನ ದೃಷ್ಟಿಕೋನಗಳು: ಸಮಸ್ಯೆಗಳು, ಸವಾಲುಗಳು ಮತ್ತು ಭವಿಷ್ಯದ ದಿಕ್ಕು-ದಿಸೆಗಳು’ ವಿಷಯ ಕುರಿತಾದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ಜಿ.ಎಚ್.ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಬಿ.ನಾಡಗೌಡರ ಮಾತನಾಡಿ, ‘ಸಮಾಜ ವಿಜ್ಞಾನದ ಕಾರ್ಯಾಗಾರದಲ್ಲಿ ದೈಹಿಕ ಶಿಕ್ಷಣವನ್ನು ಸೇರಿಸಿಕೊಂಡಿರುವುದು ಅರ್ಥಪೂರ್ಣವಾಗಿದೆ. ಇಂದು ನಾವೆಲ್ಲರೂ ಮಣ್ಣಿನೊಂದಿಗಿನ ಒಡನಾಟದಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ ನಾವು ಹಿಂದಿರುಗಿ ನೋಡಿದಾಗ, ನಮ್ಮ ಪೂರ್ವಜರು ಕಾಯಕಜೀವಿಗಳಾಗಿದ್ದರಿಂದ ಆರೋಗ್ಯವಂತರಾಗಿದ್ದರು. ಆದರೆ ಇಂದಿನ ಪೀಳಿಗೆಯಲ್ಲಿ ಅನಾರೋಗ್ಯ ಹೆಚ್ಚುತ್ತಿದ್ದು ಅವರಿಗೆ ಯೋಗ ಮತ್ತು ವ್ಯಾಯಾಮದ ಅಗತ್ಯವಿದೆ’ ಎಂದು ಹೇಳಿದರು.

ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಂಜುನಾಥ ಮುನವಳ್ಳಿ ಮಾತನಾಡಿ, ‘ಇಂತಹ ಸಮ್ಮೇಳನಗಳು ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳನ್ನು ಮೂಡಿಸುತ್ತವೆ. ಅಧ್ಯಾಪಕರಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಲು ಕಾರಣವಾಗುತ್ತದೆ. ಜ್ಞಾನದ ವಿನಿಮಯ ನಡೆಯುತ್ತದೆ. ಸಂಶೋಧನಾ ಪ್ರಬಂಧಗಳ ಮಂಡನೆ ಮತ್ತು ಪ್ರಕಟಣೆಯು ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ದಾರಿದೀಪವಾಗಲಿದೆ’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಒಟ್ಟು 90ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಪಿ. ಸಂಶಿಮಠ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ನಿಲೂಗಲ್ ಹಾಗೂ ಶಲ್ಲಿಕೇರಿ ವಕೀಲರು ಇದ್ದರು.

ಡಾ.ನಾಗರಾಜ ಓಬಯ್ಯ ಸ್ವಾಗತಿಸಿದರು. ಡಾ.ಕಲ್ಯಾಣಿ ಬಿ. ಹುಲಕುಂದ ವಂದಿಸಿದರು. ಸುಶ್ಮಿತಾ ಪೂಜಾರ ಪ್ರಾರ್ಥಿಸಿದರು. ಪ್ರೊ.ಸಂಜನಾ ಎಸ್.ಎಂ. ಮತ್ತು ಪ್ರೊ.ಸಂಗೀತಾ ವಣಗೇರಿ ನಿರೂಪಿಸಿದರು.

ಡಾ.ರಮೇಶ್ ಜಿ.ಕೆ., ಪ್ರೊ.ಜಗನ್ನಾಥ್ ಮಲಗೊಂಡ, ಪ್ರೊ.ಜಗನ್ನಾಥ್ ಆರ್. ಅತಿಥಿಗಳನ್ನು ಪರಿಚಯಿಸಿದರು. ಜಗದೀಶ ನಾಯಕ್ ವೈ.ಡಿ., ಪ್ರೊ.ಮಲ್ಲನಗೌಡ ಚಿನ್ನಪ್ಪಗೌಡರ, ಡಾ.ನೇತ್ರಾವತಿ ಅಂಗಡಿ ಮತ್ತು ಮಂಜಪ್ಪ ಸಣ್ಣಬಸಪ್ಪನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-23-1568720021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.