ಮುನಿರಾಬಾದ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಸ್ವ ಸಹಾಯ ಸಂಘದ ಸದಸ್ಯರಿಗೆ ಖಾತೆಯಿಂದ ಹಣ ತೆಗೆದುಕೊಳ್ಳುವ ಶುಲ್ಕ ರಹಿತ ನೂತನ ‘ಡಿಜಿ ಪೇ’ ಪದ್ಧತಿಯನ್ನು ಪರಿಚಯಿಸಿದೆ.

ಸಮೀಪದ ಬೂದುಗುಂಪ ಗ್ರಾಮದಲ್ಲಿ ಬುಧವಾರ ಯೋಜನೆಯ ಸಿ.ಎಸ್.ಸಿ (ಕಾಮನ್ ಸರ್ವಿಸ್ ಸೆಂಟರ್)ನಲ್ಲಿ ನೂತನ ಸೇವೆಗೆ ಚಾಲನೆ ನೀಡಲಾಯಿತು.

ವಲಯದ ಮೇಲ್ವಿಚಾರಕ ರವಿಚಂದ್ರ ಮಾತನಾಡಿ, ‘ಸಂಘದ ಸದಸ್ಯೆಯರು ಬ್ಯಾಂಕ್ ಅಥವಾ ಎಟಿಎಂಗೆ ಹೋಗುವ ಬದಲು ಸಿ.ಎಸ್.ಸಿ ಕೇಂದ್ರಕ್ಕೆ ಬಂದು ಎಟಿಎಂ ಕಾರ್ಡ್ ಸಹಾಯದಿಂದ ತಮ್ಮ ಖಾತೆಯಿಂದ ದಿನಕ್ಕೆ ಗರಿಷ್ಠ ₹20 ಸಾವಿರದವರೆಗೆ ಹಣ ಹಿಂತೆಗೆದುಕೊಳ್ಳಬಹುದು. ಇದಕ್ಕೂ ಮುನ್ನ ಖಾಸಗಿ ವ್ಯಕ್ತಿಗಳಲ್ಲಿ ಹಣ ಹಿಂತೆಗೆದುಕೊಳ್ಳಲು ಶುಲ್ಕ ಭರಿಸಬೇಕಾಗಿತ್ತು. ಆದರೆ ಈ ಕೇಂದ್ರದಲ್ಲಿ ಯಾವುದೇ ಶುಲ್ಕ ನೀಡುವಂತಿಲ್ಲ. ಶುಲ್ಕ, ಪ್ರಯಾಣದ ಖರ್ಚು ಮತ್ತು ಸಮಯವನ್ನು ಕೂಡ ಉಳಿಸಬಹುದು’ ಎಂದರು.

ಪ್ರಮುಖರಾದ ಕರಿಯಪ್ಪ, ಮಲ್ಲೇಶ, ಒಕ್ಕೂಟದ ಅಧ್ಯಕ್ಷೆ ಹುಲಿಗೆಮ್ಮ ಡೊಳ್ಳಿನ್, ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿಗಳಾದ ದೇವಮ್ಮ, ಪುಷ್ಪಾ ಇತರ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-35-1663293366

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.