ಧಾರವಾಡ: ‘ಪ್ರಸ್ತುತ ಸಿನಿಮಾ ಹಾಡುಗಳು, ಕವಿತೆ, ಕಥೆಗಳು ಕೃತಕ ಬುದ್ಧಿಮತ್ತೆ (ಎಐ) ಮೂಲಕ ಬರುತ್ತಿವೆ. ಇದು ಸೃಜನಶೀಲ ಬರವಣಿಗೆ ಮೇಲಿನ ದಾಳಿಯಾಗಿದೆ' ಎಂದು ಸಾಹಿತಿ ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಎಐ ಬರವಣಿಗೆಯಲ್ಲಿ ಜೀವಂತಿಕೆ ಇಲ್ಲ. ವಿಷಯವನ್ನು ಜೋಡಿಸಿ ಕೊಡುತ್ತೆ ಎಂಬುದು ಹೊರತುಪಡಿಸಿದರೆ, ಸೃಜನಶೀಲತೆಯು ಈ ಬರವಣಿಗೆಯಲ್ಲಿ ಕಂಡುಬರುವುದಿಲ್ಲ’ ಎಂದರು.

‘ಕನ್ನಡ ಸಾಹಿತ್ಯ ಬಿಕ್ಕಟ್ಟಿಗೆ ಸಿಲುಕಿದೆ. ಒಂದೊಮ್ಮೆ ಪ್ರತಿರೋಧ ಒಡ್ಡುತ್ತಿದ್ದ ಕನ್ನಡ ಸಾಹಿತ್ಯ ಇಂದು ಮೌನವಾಗಿದೆ. ಇಂದು ಬರಹವು ಬಹಳಷ್ಟು ಸುಲಭವಾಗಿದೆ. ಆದರೆ, ಅದು ಅವಕಾಶವಾದಿ ಮತ್ತು ಅಪಯಕಾರಿಯಾಗಿ ಬದಲಾಗಿದೆ. ಇದರಿಂದ ಸಾಹಿತ್ಯದ ಗೌರವ ಕಡಿಮೆಯಾಗಿದೆ. ಈ ಬಗ್ಗೆ ಹಿರಿಯ ಸಾಹಿತಿಗಳು ಚಿಂತನೆ ನಡೆಸಬೇಕು’ ಎಂದರು.

ಸಮ್ಮೇಳನಾಧ್ಯಕ್ಷೆ ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ‘ಕನ್ನಡ ಸಾಹಿತ್ಯವು ಅಕ್ಷರಗಳ ವಿಲಾಸವಾಗಬಾರದು. ಅದು ಸಮಾಜದ ಎಲ್ಲರ ಧ್ವನಿಯಾಗಬೇಕು. ಮನುಷ್ಯತ್ವ ಎಚ್ಚರಿಸುವ ಮತ್ತು ಪ್ರೀತಿಯನ್ನು ಬಿತ್ತುವ ಕನ್ನಡಿಯಾಗಬೇಕು’ ಎಂದರು.

‘ಜಾಗತೀಕರಣದಿಂದ ಕನ್ನಡ ಭಾಷೆ ಸೊರಗಬಾರದು. ತಂತ್ರಜ್ಞಾನದ ಜೊತೆಗೆ ಕನ್ನಡವನ್ನು ಬೆಸೆಯಬೇಕು. ಕನ್ನಡಿಗರು ಕೀಳರಿಮೆ ಬಿಟ್ಟು ಹೆಮ್ಮೆಯಿಂದ ಕನ್ನಡ ಮಾತನಾಡಬೇಕು. ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಥಮ ಅದ್ಯತೆ ಸಿಗಬೇಕು’ ಎಂದು ಹೇಳಿದರು.

ಕರ್ನಾಟಕ ಬಾಲವಿಕಾಸ ಅಕ್ಯಾಡೆಮಿ ಅಧ್ಯಕ್ಷ ಅಡವೀಶ ಇಟಗಿ ಮಾತನಾಡಿ, ‘ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಇದು ಒಳ್ಳೆಯ ನಿರ್ಧಾರ’ ಎಂದರು.

ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ವೀಣಾ ಬಿರಾದಾರ, ಸವಿತಾ ಅಮರಶೆಟ್ಟಿ, ಎಸ್.ಎಸ್.ದೊಡಮನಿ, ಪ್ರಮೀಳಾ ಜಕ್ಕಣ್ಣವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-24-1576099369

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.