ಧಾರವಾಡ: ‘ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರ ನೇಮಕಾತಿ 20 ವರ್ಷಗಳಿಂದ ನಡೆದಿಲ್ಲ. ಈ ಕುರಿತು ಶಿಕ್ಷಕರು ಸಂಘಟಿತರಾಗಿ ಸರ್ಕಾರದ ಗಮನ ಸೆಳೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಸುವರ್ಣ ಸಂಭ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ವರ್ಣ ಸುವರ್ಣ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರವು ಭೌಗೋಳಿಕ ಸಂಪತ್ತಿನಷ್ಟೇ (ಅರಣ್ಯ, ಖನಿಜ ಸಂಪತ್ತು) ಪ್ರಾಮುಖ್ಯತೆಯನ್ನು ಶಿಲ್ಪಕಲೆ, ಚಿತ್ರಕಲೆಗೆ ನೀಡಬೇಕು. ಚಿತ್ರಕಲೆ ಅಭಿರುಚಿಯನ್ನು ಪ್ರೋತ್ಸಾಹಿಸುವುದರ ಜತೆಗೆ ಅವುಗಳನ್ನು ಉಳಿಸಿ ಬೆಳೆಸಲು ಕ್ರಮವಹಿಸುವುದು ಅವಶ್ಯ’ಎಂದರು.

‘ಚಿತ್ರಕಲಾ ಕ್ಷೇತ್ರಕ್ಕೆ ಮಹಾವಿದ್ಯಾಲಯದ ಕೊಡುಗೆ ಅನನ್ಯವಾಗಿದೆ. ಇಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ’ ಎಂದರು.

‘ಸಂಸ್ಥೆಯ ಹಳೇ ವಿದ್ಯಾರ್ಥಿಗಳೇ ಹಣ ನೀಡಿ ಸುವರ್ಣ ಸಂಭ್ರಮ ಅಚರಿಸಿದ್ದಾರೆ. ಭಾರತವು ಶಿಲ್ಪಕಲೆ, ಚಿತ್ರಕಲೆಗೆ ಹೆಸರಾಗಿದೆ. ಕಲೆಯನ್ನು ಉಳಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು' ಎಂದರು.

ಕರ್ನಾಟಕ ಕಾಲೇಜಿನಿಂದ ಜುಬಿಲಿ ರಸ್ತೆ ಮಾರ್ಗವಾಗಿ ಆರ್ಟ್ ಗ್ಯಾಲರಿವರೆಗೆ ಶೋಭಾಯಾತ್ರೆ ನಡೆಯಿತು. ಕಲಾವಿದ ಬಿ.ಮಾರುತಿ, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಾಲು ಗಸ್ತಿ, ಚಿತ್ರಕಲಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆರ್ ಬಾಳಿಕಾಯಿ, ಬಿ.ಎಂ ಬಡಿಗೇರ, ಎನ್.ಎಂ ದಾಟನಾಳ, ಬಿ.ಎಸ್.ತೋಟಗಿ, ಬಸವರಾಜ ಕುರಿ, ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥ ಎಸ್.ಕೆ ಪತ್ತಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-501925825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.