ಉಪ್ಪಿನಬೆಟಗೇರಿ: ’ವಿದ್ಯೆಯೊಂದಿಗೆ ಸಂಸ್ಕಾರ ಮತ್ತು ಮೌಲ್ಯವು ಬೆರೆತಾಗ ಮಾತ್ರ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯ’ ಎಂದು ಹರ್ಲಾಪುರದ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

ಧಾರವಾಡ ತಾಲ್ಲೂಕಿನ ನೀರಲಕಟ್ಟಿ ಗ್ರಾಮದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ’ಪ್ರಥಮ ಪಾಠ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮನುಷ್ಯನು ಭೂಮಿ, ಧನ, ಆಸ್ತಿಯ ರೂಪದಲ್ಲಿ ಗಳಿಸಿದ ಸಂಪತ್ತು ಕ್ರಮೇಣ ವ್ಯಯವಾಗುತ್ತ ಹೋಗುತ್ತದೆ. ಆದರೆ ವಿದ್ಯೆ ಎಂಬುವ ಸಂಪತ್ತು ಬಳಸಿದಂತೆ ಹೆಚ್ಚಾಗುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ವಿದ್ಯಾ ಸಂಪತ್ತು ಗಳಿಸುವತ್ತ ಗಮನ ಹರಿಸಬೇಕು’ ಎಂದರು.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ವಿದ್ಯಾಲಯದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಅಧ್ಯಕ್ಷತೆ ವಹಿಸಿ ವಿದ್ಯಾಕೇಂದ್ರದ ಮುಂದಿನ ಗುರಿಗಳ ಕುರಿತು ಮಾತನಾಡಿದರು.

ಶಾಲಾ ವಿಭಾಗದ ಪ್ರಾಚಾರ್ಯೆ ಅನಿತಾ ರೈ ಹಾಗೂ ಕಾಲೇಜು ವಿಭಾಗದ ಪ್ರಾಚಾರ್ಯ ರವಿಪ್ರಕಾಶ ಎಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಜೋಶಿ, ಗುರುರಾಜ ಅಗಡಿ, ರಾಮಕೃಷ್ಣ.ಎಚ್. ಇದ್ದರು. ದೀಪಾ ಕುಲಕರ್ಣಿ ಸ್ವಾಗತಿಸಿದರು, ಗಿರಿಜಾ ಜಿ., ವಂದಿಸಿದರು, ಪ್ರೇಮಾ.ಎಸ್. ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-24-1250607956

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.