ಧಾರವಾಡ: ನಗರದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ಎಂಟನೇ ಘಟಿಕೋತ್ಸವ ಮೇ 30ರಂದು ನಡೆಯಲಿದೆ ಎಂದು ಐಐಐಟಿ ನಿರ್ದೇಶಕ ಪ್ರೊ.ಮಹಾದೇವ ಪ್ರಸನ್ನ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವದೆಹಲಿ ಐಐಟಿ ನಿರ್ದೇಶಕ ಪ್ರೊ.ರಂಗನ ಬ್ಯಾನರ್ಜಿ ಅವರು ಘಟಿಕೋತ್ಸವ ಭಾಷಣ ಮಾಡುವರು. ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳುವರು. ಐಐಐಟಿ ಆಡಳಿತ ಮಂಡಳಿ ಅಧ್ಯಕ್ಷ ಜಲಜ ದಾನಿ ಅಧ್ಯಕ್ಷತೆ ವಹಿಸುವರು ಎಂದರು.

ಎಂ.ಟೆಕ್ (ಸಂಶೋಧನೆ) ಇಬ್ಬರು, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ 136, ಡೇಟಾ –ಎಐ 66 ಹಾಗೂ ಎಲೆಕ್ಟ್ರಾನಿಕ್ಸ್–ಕಮ್ಯುನಿಕೇಷನ್ 51 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು. ರಾಷ್ಟ್ರಪತಿ ಪದಕ, ನಿರ್ದೇಶಕರ ಪದಕ ಹಾಗೂ ಸಂಸ್ಥೆ ಪದಕ ಸಹಿತ ಒಟ್ಟು ಆರು ಪದಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.

2026–27ನೇ ಶೈಕ್ಷಣಿ ಸಾಲಿನಿಂದ ಹೊಸದಾಗಿ ಬಿ.ಟೆಕ್ ಎಐ–ಕಂಪ್ಯೂಟಿಂಗ್ ಕೋರ್ಸ್ ಆರಂಭಿಸಲಾಗುವುದು. 85 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುವುದು. ಎಂ.ಟೆಕ್ ಕ್ವಾಂಟಮ್ ಎಐ ಕಂಪ್ಯೂಟಿಂಗ್ ಕೋರ್ಸ್ ಆರಂಭಿಸಲಾಗುವುದು ಎಂದರು.

ಐಐಐಟಿ ಆವರಣದಲ್ಲಿ 5ಎಂಡಬ್ಲು ಡೇಟಾ ಸೆಂಟರ್ ಜತೆ ಸಂಶೋಧನಾ ಉದ್ಯಾನ (ರೀಸರ್ಚ್ ಪಾರ್ಕ್) ಆರಂಭಿಸಲಾಗುವುದು. ಉತ್ತರ ಕರ್ನಾಟಕ ಭಾಗದ ಜಾಗತಿಕ ಸಾಮರ್ಥ್ಯದ ಕೇಂದ್ರವನ್ನಾಗಿ ಬೆಳೆಸುವುದು ಉದ್ದೇಶದಿಂದ ಇದನ್ನು ಸ್ಥಾಪಿಸಲಾಗುತ್ತಿದೆ. ಐದು ಮಹಡಿಗಳ ಕಟ್ಟಡ ನಿರ್ಮಿಸಲಾಗುವುದು. ಹೊರಾಂಗಣ ಕ್ರೀಡಾಂಗಣ ಕಾಮಗಾರಿ, ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಹಾಗೂ 30 ಕೊಠಡಿಗಳ ಅತಿಥಿ ಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 240 ಆಸನ ಸಾಮರ್ಥ್ಯದ ಎರಡು ತರಗತಿ ಕೊಠಡಿ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಸತೀಶ ಅಣ್ಣಿಗೇರಿ, ವಾಸುದೇವ ಪರ್ವತಿ, ಪ್ರೊ.ಗೋಪಿನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-1250226916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.