ದಾಂಡೇಲಿ: ‘ಶಿಕ್ಷಣ, ಶಿಕ್ಷೆಯಾಗಬಾರದು. ಅಂಕ ಗಳಿಕೆಗಿಂತ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ಧಾರವಾಡದ ಐಐಟಿ ಡೀನ್ ಹಾಗೂ ವಿಜ್ಞಾನಿ ಎಸ್.ಎಂ.ಶಿವಪ್ರಸಾದ ಹೇಳಿದರು.

ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

‘ಯುವ ಜನರೇ ಹೆಚ್ಚಿರುವ ಭಾರತದಲ್ಲಿ ಯುವಶಕ್ತಿ ,ಸಾಮರ್ಥ್ಯ ಅಭಿವ್ಯಕ್ತಗೊಳ್ಳುತ್ತಿಲ್ಲ. ತನ್ನನ್ನು ತಾನು ತಿಳಿಯದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಕೀಳರಿಮೆಗಳಿಂದ ಹೊರಬಂದು ತಮ್ಮ ಅಂತರಂಗದ ಸಾಮರ್ಥ್ಯ ಸಾಬೀತುಪಡಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ. ಡಿ.ಒಕ್ಕುಂದ ಮಾತನಾಡಿ, ‘ಪಠ್ಯೇತರ ಚಟುವಟಿಕೆಗಳು ಸಾಮಾಜಿಕ ಜವಾಬ್ದಾರಿ ಕಲಿಸಿಕೊಡುತ್ತವೆ’ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಯಾಸ್ಮಿನ ಕಿತ್ತೂರ ಬಹುಮಾನ ವಿತರಿಸಿದರು. ಉಪನ್ಯಾಸಕರಾದ ವಿನಯಾ ಜಿ.ನಾಯಕ, ಚಂದ್ರಶೇಖರ ಲಮಾಣಿ, ಬಸವರಾಜ ಹೂಲಿಕಟ್ಟಿ, ಮನೋಹರ ಉಡಚಂಚಿ, ಉಪನ್ಯಾಸಕ ಉಮೇಶಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-20-1957261120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.