ಧಾರವಾಡ: ‘ನಗರದ ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವವು ಏ.23ರಂದು ನಡೆಯಲಿದೆ. 2023–24ನೇ ಸಾಲಿನಲ್ಲಿ ವಿವಿಧ ಕೋರ್ಸ್ಗಳಲ್ಲಿ ಸಾಧನೆ ಮಾಡಿದ 113 ವಿದ್ಯಾರ್ಥಿಗಳಿಗೆ (83 ವಿದ್ಯಾರ್ಥಿನಿಯರು, 30 ವಿದ್ಯಾರ್ಥಿಗಳು) 270 ಚಿನ್ನದ ಪದಕ, 252 ಮಂದಿಗೆ (172 ಪುರಷರು, 80 ಮಹಿಳೆಯರು) ಪಿಎಚ್.ಡಿ ಪ್ರದಾನ ಮಾಡಲಾಗುವುದು’ ಎಂದು ಕುಲಪತಿ ಪ್ರೊ.ಎ.ಎಂ.ಖಾನ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2023–24ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ 4129, ಸ್ನಾತಕ ಪದವಿ 24030 ಹಾಗೂ ಪಿ.ಜಿ ಡಿಪ್ಲೊಮಾ 69 ಮಂದಿ ಪೂರೈಸಿದ್ಧಾರೆ. ಗೌರವ ಡಾಕ್ಟರೇಟ್ಗೆ ಒಂಬತ್ತು ಮಂದಿಯ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಲಾಗಿದೆ. ರಾಜ್ಯಪಾಲರು ಪರಿಶೀಲಿಸಿ ಮೂರು ಹೆಸರುಗಳನ್ನು ಅಖೈರುಗೊಳಿಸುವರು’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯದಿಂದ ನೀಡುವ ‘ಅರಿವೇ ಗುರು’ ಪ್ರಶಸ್ತಿಗೆ ಆಯ್ಕೆ ನಿಟ್ಟಿನಲ್ಲಿ ಸಮಿತಿ ಸಭೆ ನಡೆದಿದೆ. ಘಟಿಕೋತ್ಸವ ಬಳಿಕ ಆಯ್ಕೆ ಪ್ರಕ್ರಿಯೆ ಮುಗಿಸಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು. ಪ್ರಸಕ್ತ ವರ್ಷದಿಂದ ಬಸವೇಶ್ವರ ಅಧ್ಯಯನ ಪೀಠದಿಂದ ‘ಬಸವಶ್ರೀ’ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಪುರಸ್ಕಾರವು ₹ 25 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ. ಈ ಪ್ರಶಸ್ತಿಗಾಗಿ ಗದಗಿನ ತೋಂಟದಾರ್ಯ ಸ್ವಾಮೀಜಿ ಅವರು ₹ 5 ಲಕ್ಷ ಠೇವಣಿ ಇಟ್ಟಿದ್ಧಾರೆ’ ಎಂದು ಮಾಹಿತಿ ನೀಡಿದರು.

‘2024–25ನೇ ಸಾಲಿಗೆ ಸಂಬಂಧಿಸಿದಂತೆ 76ನೇ ವಾರ್ಷಿಕ ಘಟಿಕೋತ್ಸವನ್ನು ಇದೇ ವರ್ಷ ಆಯೋಜಿಸಲಾಗುವುದು. ಪ್ರಸಕ್ತ ವರ್ಷದಿಂದ ಸ್ನಾತಕ ಪದವಿ ಕೋರ್ಸ್ ಪಠ್ಯದಲ್ಲಿ ‘ಕೃತಕ ಬುದ್ಧಿಮತ್ತೆ’ (ಎಐ) ತಂತ್ರಜ್ಞಾನ ಪರಿಚಯಿಸಲಾಗುವುದು. 2, 4 ಮತ್ತು 6ನೇ ಸೆಮಿಸ್ಟರ್ಗೆ ಈ ಪಠ್ಯ ಅಳವಡಿಸಲಾಗುವುದು’ ಎಂದು ಉತ್ತರಿಸಿದರು.

‘ಈ ವರ್ಷ ₹ 136 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ ₹ 67.5 ಕೋಟಿನೀಡಿದೆ. ಕಳೆದ ವರ್ಷ ₹ 126 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ ₹ 80 ಕೋಟಿ ನೀಡಿತ್ತು.ಆಂತರಿಕವಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಕ್ರಮ ವಹಿಸಲಾಗುವುದು. 60ವರ್ಷ ತುಂಬಿದ ವಿ.ವಿಯ ಸುಮಾರು 40 ನೌಕರರನ್ನು ತೆಗೆಯಲಾಗುವುದು. ಈ ಕ್ರಮದಿಂದ ಹಣ ಉಳಿತಾಯವಾಗಲಿದೆ. ವಿಶ್ವವಿದ್ಯಾಲಯದ ಜಾಗದ ಮೋಜಣಿ (ಸರ್ವೆ) ನಡೆಯುತ್ತಿದೆ’ ಎಂದರು.

ಆಡಳಿತಾಂಗ ಕುಲಸಚಿವ ಶಂಕರ ವಣಿಕ್ಯಾಳ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ವೈ.ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರದೀಪಕುಮಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-24-382776620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.