ಧಾರವಾಡ: ‘ಜನರ ಸಂಕಷ್ಟಗಳು, ನೋವುಗಳಿಗೆ ಸ್ಪಂದಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರವು ಪರಿಣಾಮಕಾರಿ ಬೆಳವಣಿಗೆ ತರಬೇಕು. ಹೊಸ ಮಾರ್ಗಗಳನ್ನು ಸಾದರಪಡಿಸಬೇಕು’ ಎಂದು ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಹೇಳಿದರು.

ಇಲ್ಲಿ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾಹಿತ್ಯವು ಚಿಕಿತ್ಸಾ ಪದ್ಧತಿ ಇದ್ದಂತೆ. ಸಂಕಷ್ಟ, ದುಃಖಗಳಿಗೆ ಅಕ್ಷರವು ಸ್ಪಂದಿಸುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ಸಂಘಸಂಸ್ಥೆಗಳು ಶ್ರಮಿಸಬೇಕು. ಬದ್ಧತೆ ಸಾಬೀತುಪಡಿಸಬೇಕು’ ಎಂದರು.

‘ಮಹಿಳೆಯರ, ಮಕ್ಕಳ ಸಮಸ್ಯೆಗಳಿಗೆ ಅವರೇ ಹೋರಾಟ ಮಾಡಿ ಪರಿಹರಿಸಿಕೊಳ್ಳಲಿ ಎಂಬ ಜಡತ್ವವನ್ನು ಹೋಗಲಾಡಿಸಬೇಕು. ಅವರ ಸಮಸ್ಯೆಗಳೂ ಈ ಸಮಾಜದ ಸಮಸ್ಯೆಗಳು, ಅವರ ಹಕ್ಕುಗಳೂ ಮಾನವತೆಯ ಭಾಗ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳಿಗೆ ಸ್ಪಂದಿಸಲು ಭಾಷಣ ಮತ್ತು ಸಾಹಿತ್ಯದ ಆಚೆ ಹೊಸದನ್ನು ಮಾಡಬೇಕು’ ಎಂದರು.

‘ಕನ್ನಡ ಶಾಲೆಗಳ ಅಳಿವಿನ ಕುರಿತು ಪ್ರತಿರೋಧ ತೋರಬೇಕು. ಕೆಪಿಎಸ್ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗಳಿಂದ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತದೆ’ ಎಂದರು.

ಎಂ.ಆರ್.ನದಾಫ್ ಅವರ ‘ಅರಳಿದ ಮೊಗ್ಗು’, ಶಾಂತಾ ಬಸವರಾಜ ಅವರ ’ಬಸವೇಶ್ವರ’ ಹಾಗೂ ಪ್ರೊ.ಎಸ್.ಆರ್.ಗುಂಜಾಳ ಅವರ ‘ವಚನ ಪದಪ್ರಯೋಗ ಕೋಶ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಸ್.ಆರ್.ಗುಂಜಾಳ ಅವರು ಸಮ್ಮೇಳನಾಧ್ಯಕ್ಷೆ ಹೇಮಾ ಪಟ್ಟಣಶೆಟ್ಟಿ ಅವರಿಗೆ ಧ್ವಜ ಹಸ್ತಾಂತರಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಕೌಜಲಗಿ, ಎಸ್.ಎಸ್.ದೊಡಮನಿ, ಪ್ರೊ.ಸಿದ್ಧಲಿಂಗ ಪಟ್ಟಣಶೆಟ್ಟಿ, ಕಲಾವಿದ ಬಿ.ಮಾರುತಿ, ಶಂಕರ ಹಲಗತ್ತಿ, ಮಾಜಿ ಶಾಸಕಿ ಸೀಮಾ ಮಸೂತಿ, ಹು–ಧಾ ಮಹಾನಗರ ಪಾಲಿಕೆ ಈರೇಶ ಅಂಚಟಗೇರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-24-352741773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.