ಧಾರವಾಡ: ‘ಗಣಿತ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ನಡೆಯಬೇಕು. ಗಣಿತದ ಕ್ಷೇತ್ರದ ಸಂಶೋಧನೆಗಳ ಪ್ರಾಮುಖ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತಿಳಿಸುವುದು ಅವಶ್ಯ’ ಎಂದು ಭಾರತೀಯ ಗಣಿತ ಸಂಘದ ಕಾರ್ಯದರ್ಶಿ ಪ್ರೊ.ಎಂ.ಎಂ.ಶಿಕರೆ ಹೇಳಿದರು.

ಕರ್ನಾಟಕ ವಿ.ವಿ ಗಣಿತ ಅಧ್ಯಯನ ವಿಭಾಗ, ಪಾವಟೆ ಇನ್ಸ್ಟಿಟ್ಯೂಟ್ ಮೆಥಮೆಟಿಕಲ್ ಸೈನ್ಸ್, ಗಣಕವಿಜ್ಞಾನ ವಿಭಾಗ ಮತ್ತು ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗ ವತಿಯಿಂದ ಮಾಜಿ ಕುಲಪತಿ ಪ್ರೊ.ಎಚ್.ಬಿ.ವಾಲಿಕಾರ ಅವರ 75ನೇ ಜನ್ಮದಿನೋತ್ಸವ ಅಂಗವಾಗಿ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಗಣಿತ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ಆಗಿವೆ. ‘ಮೆಥಮೆಟಿಕ್ಸ್’, ‘ಮ್ಯಾಟ್ರಿಕ್ಸ್’ ಸಹಿತ ವಿವಿಧ ವಿಷಯಗಳ ಕುರಿತು 2016ರಿಂದ ಅಂತರರಾಷ್ಟ್ರೀಯ ಸಂಶೋಧಕರು ಹೆಚ್ಚು ಬೆಳೆಕು ಚೆಲ್ಲಿದ್ದಾರೆ. ಗಣಿತ ಶಾಸ್ತ್ರದ 'ಪಾಥ್- ಮ್ಯಾಟಮಿಕ್ ಥಿಯರಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳು ಹೊಸ ವ್ಯಾಖ್ಯಾನವನ್ನು ನೀಡಿವೆ. ಗ್ರಾಫ್ ಥಿಯರಿಗಳಲ್ಲಿ ಹೆಚ್ಚು ಸಂಶೋಧನೆಗಳು ನಡೆದಿವೆ’ ಎಂದು ತಿಳಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ‘ಪ್ರೊ.ವಾಲಿಕಾರ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಅನೇಕ ಹುದ್ದೆಗಳನ್ನು ಭರ್ತಿ ಮಾಡಿದರು’ ಎಂದರು.

ಪ್ರೊ.ಎ.ಬಿ.ವೇದಮೂರ್ತಿ, ಸುಭಾಷಚಂದ್ರ, ನಾಟೀಕಾರ, ಪ್ರೊ.ಎಸ್.ಸಿ.ಶಿರಾಳಶೆಟ್ಟಿ, ಪ್ರೊ.ಶ್ರೀದೇವಿ, ಪ್ರೊ.ನಾಗೇಶ.ಎಸ್, ಪ್ರೊ.ಐ.ಜಿ.ಸನದಿ, ಪ್ರೊ.ಪಿ.ಜಿ.ಪಾಟೀಲ, ಪ್ರೊ.ಪಿ.ಆರ್.ಹಂಪಿಹೋಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-23-1959446547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.