ಧಾರವಾಡ: 'ವಿದ್ಯಾರ್ಥಿಗಳು ಕೇವಲ ಮನರಂಜನೆಗಾಗಿ ಮೊಬೈಲ್ ಫೋನ್ಗಳನ್ನು ಬಳಸದೇ ಜ್ಞಾನ ಸಂಪಾದನೆಗೆ ಪೂರಕವಾಗಿ ಬಳಸಿಕೊಳ್ಳಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಹೇಳಿದರು.

ಸಮಾಜ ಸೇವಕ ಅಚ್ಯುತಾ ಸಾಮಂತಾ ಅವರ ಆರ್ಟ್ ಆಫ್ ಗಿವಿಂಗ್ 13 ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ನಡೆದ ಪೌರಕಾರ್ಮಿಕರಿಗೆ ಗೌರವ, ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

'ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಈಚಿನ ದಿನಗಳಲ್ಲಿ ಯುವ ಪೀಳಿಗೆ ಮತ್ತು ಮಕ್ಕಳು ಮೊಬೈಲ್ ಫೋನ್ಗಳನ್ನು ಕೇವಲ ಸಾಮಾಜಿಕ ಜಾಲತಾಣಗಳು, ರೀಲ್ಸ್ ವೀಕ್ಷಣೆ ಹಾಗೂ ಆನ್ಲೈನ್ ಗೇಮ್ಗಳಂತಹ ಕ್ಷಣಿಕ ಮನರಂಜನೆಗೆ ಮಾತ್ರ ಅತಿಯಾಗಿ ಬಳಸುತ್ತಿರುವುದು ಕಳವಳಕಾರಿ’ ಎಂದರು.

'ಪೌರಕಾರ್ಮಿಕರು, ಸೈನಿಕರು, ಪೊಲೀಸರು ನಮಗಾಗಿ ಜೀವನವನ್ನು ಮುಡಿಪಾಗಿಟ್ಟ ಜೀವಿಗಳು, ಅವರನ್ನು ಗೌರವಿಸುವುದು ಒಂದು ದೊಡ್ಡ ಪುಣ್ಯದ ಕೆಲಸ‘ ಎಂದರು.

ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, 'ಪೌರಕಾರ್ಮಿಕರು ಆರೋಗ್ಯದ ರಾಯಭಾರಿಗಳು, ಎಲ್ಲರೂ ಆರೋಗ್ಯವಾಗಿರಲು ಸ್ವಚ್ಛತೆಯೇ ಕಾರಣ, ಈ ಸ್ವಚ್ಛತೆಯ ಪವಿತ್ರ ಕಾಯಕ ಮಾಡುವ ಜೀವಿಗಳು, ಕೊರೊನಾದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಮಾಡಿದ ಪೌರಕಾರ್ಮಿಕರ ತ್ಯಾಗ ಅನನ್ಯ’ ಎಂದು ಹೇಳಿದರು. ಕರ್ನಾಟಕ ವಿವಿ ವಿದ್ಯಾರ್ಥಿ ಕ್ಷೇಮಪಾಲನ ಘಟಕದ ನಿರ್ದೇಶಕ ಸಂಗಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ವಿ.ಬಿ. ಸಾವಿರಮಠ, ಆರ್ಟ್ ಆಫ್ ಗಿವಿಂಗ್ ಸಂಯೋಜಕ ಸಂಜಯಕುಮಾರ ಬಿರಾದಾರ, ವಕೀಲೆಸರಸ್ವತಿ ಪೂಜಾರ, ಅಭಿಷೇಕ, ಆದಿತಿ ಪರಪ್ಪ, ವಿಜಯಲಕ್ಷ್ಮೀ ಮಾನೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-24-1300308643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.