ಧಾರವಾಡ: ‘ಶಿಕ್ಷಕರು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಣ ನೀಡುತ್ತಿಲ್ಲ, ಅವರ ಸಾಧನೆಗೆ ದಾರಿದೀಪವಾಗುತ್ತ ಉತ್ತಮ ಸಮಾಜ ರೂಪಿಸುತ್ತಿದ್ದಾರೆ’ ಎಂದು ಜೆಎಸ್ಎಸ್ ಕಾರ್ಯದರ್ಶಿ ಅಜಿತ ಪ್ರಸಾದ ಹೇಳಿದರು.

ಬೆಂಗಳೂರಿನ ವಿಸ್ತಾರಾ ಗ್ಲೋಬಲ್ ಟೀಚರ್ಸ್ ಟ್ರೇನಿಂಗ್ ಅಕಾಡೆಮಿ ವತಿಯಿಂದ ವಿದ್ಯಾಗಿರಿಯ ಜೆಎಸ್ಎಸ್ ಸಂಸ್ಥೆಯು ಶಾಲೆಯ ಶಿಕ್ಷಕರಿಗೆ ಈಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮ ಬೆಳೆಸುತ್ತಾರೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿ ಅವರನ್ನು ಇನ್ನೂ ಸಕ್ಷಮರನ್ನಾಗಿಸಬೇಕಾದುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ’ ಎಂದರು.

‘ತರಬೇತಿಯಲ್ಲಿ ಶಿಕ್ಷಕರು ಹೊಸ ಬೋಧನಾ ವಿಧಾನಗಳನ್ನು ಕಲಿತು ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ ಪಾಠ ಮಾಡಬೇಕು. ಇಂದಿನ ತಂತ್ರಜ್ಞಾನಗಳಿಗೆ ಶಿಕ್ಷಕರು ಹೊಂದಿಕೊಳ್ಳಬೇಕು. ಡಿಜಿಟಲ್ ಯುಗವಾದ ಕಾರಣ ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ಆನ್ಲೈನ್ ಪಾಠಗಳ ಬಳಕೆ ಮುಖ್ಯ’ ಎಂದರು.

ವಿಸ್ತಾರಾ ಗ್ಲೋಬಲ್ ಟೀಚರ್ಸ್ ಟ್ರೇನಿಂಗ್ ಅಕಾಡೆಮಿ ಮುಖ್ಯಸ್ಥ ಮಹೇಶ ಮಾಶಾಳ ಮಾತನಾಡಿ. ‘ಎಲ್ಲ ಶಿಕ್ಷಕರಿಗೂ ಸಮಾಜಕ್ಕೆ ಒಳ್ಳೆಯದನ್ನು ನೀಡುವ ಸಾಮರ್ಥ್ಯವಿದೆ. ಆದರೆ, ಮಾರ್ಗದರ್ಶನ, ಮಾಹಿತಿ ಮತ್ತು ಸರಿಯಾದ ಪಠ್ಯಕ್ರಮದ ಕೊರತೆಯಿಂದ ಶಿಕ್ಷಕರ ಸಾಧನೆಯಲ್ಲಿ ಕೊರೆತೆ ಕಾಣುತ್ತಿದೆ. ಆದ್ದರಿಂದ ಈ ಕಾರ್ಯಾಗಾರದ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.

ಜೆಎಸ್ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ‘ಮಕ್ಕಳು ಪಾಲಕರ ಭವಿಷ್ಯದ ಕನಸುಗಳು, ಆ ಕನಸುಗಳನ್ನು ನೈತಿಕ ನೆಲೆಗಟ್ಟಿನಲ್ಲಿ ಸರಿಯಾದ ಮಾರ್ಗದರ್ಶನದಿಂದ ಸಾಕಾರಗೊಳಿಸಬೇಕಾದುದು ಶಿಕ್ಷಕರ ಕರ್ತವ್ಯ’ ಎಂದು ಹೇಳಿದರು.

ಜೆಎಸ್ಎಸ್ ಐಟಿಐ ಕಾಲೆಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ, ವಾಣಿಶ್ರೀ, ಜೆಎಸ್ಎಸ್ ಶಾಲೆಯ ಎಲ್ಲ ಮುಖ್ಯಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-1514650172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.