ಶಿಗ್ಗಾವಿ: ಭಾವೈಕ್ಯಕ್ಕೆ ಹೆಸರಾದ ಶರೀಫ ಶಿವಯೋಗಿ ಮತ್ತು ಗುರು ಗೋವಿಂದಭಟ್ಟರ ಅಧ್ಯಯನ ಪೀಠವನ್ನು ವಿಶ್ವವಿದ್ಯಾಲಯದ ಅಕಾಡೆಮಿಕ್ ಸಭೆಯಲ್ಲಿ ಚರ್ಚಿಸಿ ಅಧ್ಯಯನ ಪೀಠವನ್ನು ಆರಂಭಿಸಲು ಪ್ರಯತ್ನಿಸುವೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಹೇಳಿದರು.

ತಾಲ್ಲೂಕಿನ ಶಿಶುವಿನಹಾಳದಲ್ಲಿ ಶುಕ್ರವಾರ ಕರ್ನಾಟಕ ವಿವಿ ಧಾರವಾಡ, ಹಾವೇರಿ ವಿವಿ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಗುಡಗೇರಿ, ಶಿಗ್ಗಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶಿಶುವಿನಹಾಳ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿ ಮಠ ಟ್ರಸ್ಟ್ ಸಹಯೋಗದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಹಾಗೂ ಭಾವೈಕ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ಅಧ್ಯಯನ ಪೀಠಗಳಿವೆ. ಆದರೆ ಈವರೆಗೂ ಯಾಕೆ ಶರೀಫರ ಮತ್ತು ಗುರು ಗೋವಿಂದಭಟ್ಟರ ಅಧ್ಯಯನ ಪೀಠ ಆರಂಭಿಸಿಲ್ಲ ಎಂಬುದು ಚಿಂತನೆಯ ವಿಷಯವಾಗಿದೆ. ಆದ್ದರಿಂದ ಗುರು ಶಿಷ್ಯ ಪರಂಪರೆ ಮತ್ತು ಭಾವೈಕ್ಯ ಉದ್ದೇಶದಿಂದ ಈ ಪೀಠವನ್ನು ಆರಂಭಿಸುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿ ಪೀಠ ಆರಂಭಿಸುವೆ’ ಎಂದರು.

ಎನ್ಎಸ್ಎಸ್ ಸ್ವಯಂಸೇವಕ ಸೇವಕಿಯರು ಕೇವಲ ನೈಸರ್ಗಿಕ ಸ್ವಚ್ಛತೆಯನ್ನು ಮಾತ್ರ ಕಾಪಾಡಿಕೊಳ್ಳದೆ ನಮ್ಮ ದೇಹ ಮನಸ್ಸಿನ ಶುದ್ಧತೆ ಕಾಪಾಡಿಕೊಳ್ಳಲು ಶಿಶುವಿನಹಾಳಾದಂತಹ ಭಾವೈಕ್ಯ ಸ್ಥಳಗಳು ತುಂಬಾ ಮುಖ್ಯವಾಗಿವೆ. ಇದನ್ನು ನಾವೆಲ್ಲರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಕರ್ನಾಟಕ ವಿವಿ ರಾಷ್ಟ್ರೀಯ ಯೋಜನಾ ಕೋಶದ ಸಂಯೋಜಕ ಎಂ.ಬಿ.ದಳಪತಿ ಮಾತನಾಡಿ, ಕುಲಪತಿ ಪ್ರೊ.ಖಾನ್ ಅವರು ಪ್ರಸ್ತುತ ನಡೆಯುತ್ತಿರುವ ಉಳವಿ, ಅಂಕೋಲ, ಹಳಿಯಾಳ ಮೊದಲಾದ ನಾಯಕತ್ವ ಶಿಬಿರಗಳಿಗೆ ಭೇಟಿ ನೀಡಿದ ಕುರಿತು ಮೆಚ್ಚುಗೆ ಉತ್ತಮವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗಂಗಾಧರ ಗುಮ್ಮಗೋಳಮಠ ಮಾತನಾಡಿ, ಈ ಕ್ಷೇತ್ರವು ವಿಶಿಷ್ಟವಾಗಿದ್ದು, ಈ ನೆಲದ ಸೌಹಾರ್ದ ಪರಂಪರೆ ಕಾಯ್ದುಕೊಳ್ಳಲು ಮತ್ತು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿರುವುದರಿಂದ ಶಿಶುವಿನಹಾಳದಲ್ಲಿ ಪ್ರತಿ ವರ್ಷವೂ ಈ ರೀತಿಯ ಶಿಬಿರ ಏರ್ಪಡಿಸಬೇಕು ಎಂದು ಹೇಳಿದರು.

ಶಿಬಿರದ ಸಂಯೋಜಕ ಪ್ರೊ.ಭೀಮೇಶ ಯರಡೋಣಿ, ಟ್ರಸ್ಟಿನ ಹಿರಿಯ ಸದಸ್ಯರಾದ ಚನ್ನಬಸಪ್ಪ ಬೆಟದೂರ, ಬಸವರಾಜ ಮಳಲಿ ಮಾತನಾಡಿದರು.

ತರಬೇತಿ ಮತ್ತು ಭಾವೈಕ್ಯ ಶಿಬಿರದಲ್ಲಿ ಭಾಗವಹಿಸಿದ್ದ ಎರಡು ನೂರು ಸ್ವಯಂಸೇವಕ,ಸೇವಕಿಯರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ವಿತರಿಸಿದರು.

ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಆನಂದ ಇಂದೂರ, ಬಿ.ಸಿ.ಅಮಾತಿ, ದೇವರಾಜು, ಎನ್.ಕೆ.ಕಡೆಮನಿ, ಶಂಭುಲಿಂಗ ಬೆನ್ನೂರ, ಸಂಗಪ್ಪ ಬಸರಕೋಡ, ಎನ್.ಕೆ.ಕಡೇಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-22-2094522791

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.