ಧಾರವಾಡ: ‘ಎಲ್ಲ ರಾಷ್ಟ್ರಗಳು ಪರಸ್ಪರ ಅವಲಂಬಿತವಾಗಿವೆ. ಎಲ್ಲರೂ ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಳ್ಳುವುದು ಅವಶ್ಯ’ ಎಂದು ಹೋರಾಟಗಾರ ಸಿದ್ದನಗೌಡ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ದಧಕ ಸಂಘದ ವತಿಯಿಂದ ಗುರುಲಿಂಗ ಕಾಪಸೆ ದತ್ತಿಯಡಿ ನಡೆದ ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲೋ ಯುದ್ಧ ನಡೆದರೆ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದುಕೊಳ್ಳಬಾರದು. ಯುದ್ಧ ಎಲ್ಲ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ, ಅದರಿಂದ ತೊಂದರೆಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದರು.

‘ಸಾಹಿತಿ ವೀಣಾ ಶಾಂತೇಶ್ವರ ಅವರು ಸ್ತ್ರೀ ಶೋಷಣೆ ವಿರೋಧಿ ಬರಹಗಾರ್ತಿ. ಅವರದು ಕಾಲದ ಮೌಲ್ಯಗಳನ್ನು ಮೀರಿದ ದಾರಿ. ಸಾಂಪ್ರದಾಯಿಕ ಮಿತಿಗಳನ್ನು ಮೀರುವ ಪ್ರಯತ್ನ ಅವರಿಗೆ ಹುಟ್ಟಿನಿಂದಲೇ ಬಂದಿದೆ. ಸ್ತ್ರೀವಾದ ಅವರ ಅಲೋಚನೆಯಲ್ಲೇ ಮಿಳಿತವಾಗಿದೆ’ ಎಂದು ಹೇಳಿದರು.

‘ವೀಣಾ ಅವರು ಸಾಮಾಜಿಕ ನೋವುಗಳನ್ನು ಕೃತಿಗಳಲ್ಲಿ ಬಿಂಬಿಸಿದ್ದಾರೆ. ಅವರಲ್ಲಿ ಪ್ರತಿರೋಧದ ಮನೋಭಾವ ಇತ್ತು. ಸ್ತ್ರೀಯನ್ನು ಮಾನವತಾವಾದದ ದೃಷ್ಟಿಯಿಂದ ನೋಡಬೇಕು. ಸ್ತ್ರೀ ಪ್ರಜ್ಞೆ ಬೆಳೆಸಿಕೊಳ್ಳಬೇಕು’ ಎಂದರು.

ಪ್ರಕಾಶಕ ಚನ್ನಬಸವಣ್ಣ ಅವರು ಅಕ್ಷರ ದಾಸೋಹಿ. ಅವರು ಸಾಹಿತ್ಯ ಲೋಕದಲ್ಲಿ ಪ್ರತಿಭೆಗಳನ್ನು ಪರಿಚಯಿಸಿ, ಬೆಳೆಸಿದರು. ಪುಸ್ತಕ ಸಂಸ್ಕೃತಿ ಬೆಳವಣಿಗೆಗೆ ಹೊಸ ಮಾದರಿ ನೀಡಿದರು ಎಂದು ಹೇಳಿದರು.

‘ಚನ್ನಬಸವಣ್ಣ ಅವರು ಲೋಹಿಯಾವಾದದಿಂದ ಪ್ರಭಾವಿರಾದವರು. 1990ರಲ್ಲಿ ಪ್ರಕಾಶನ ಸಂಸ್ಥೆ ಆರಂಭಿಸಿದರು. ಪುಸ್ತಕ ಪ್ರಕಟಣೆಯು ಉದ್ಯಮವಲ್ಲ, ಅದೊಂದು ಸಂಸ್ಕೃತಿ’ ಎಂದು ಸಾರಿದವರು. ಅವರು ಬಂಡಾಯ ಸಾಹಿತ್ಯ ಚಳವಳಿಯ ಭಾಗವಾಗಿದ್ದರು’ ಎಂದರು.

ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಹುಲಮನಿ ಅವರಿಗೆ ಗುರುಲಿಂಗ ಕಾಪಸೆ ವಿದ್ಯಾರ್ಥಿ ಬಹುಮಾನ ನೀಡಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ, ಪ್ರೊ.ವೀರಣ್ಣ ರಾಜೂರ, ಶಂಕರ ಹಲಗತ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-24-839448174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.