ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆ: ನಿರ್ದಿಷ್ಟಪಡಿಸಿದ ಹುದ್ದೆಗಳಿಗಾಗಿ ಪರೀಕ್ಷಾ ಸಿದ್ಧತೆ

ಫೆಬ್ರವರಿ 6 ರಿಂದ 8 ರವರೆಗೆ ಪರೀಕ್ಷೆ
Last Updated 26 ಜನವರಿ 2022, 9:39 IST
ಅಕ್ಷರ ಗಾತ್ರ

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಕ್ಷಸ್ಟರ್ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ), ಕ್ಷೇತ್ರ ಸಂಪನ್ಮೂಲ ವ್ಯಕ್ತಿ(ಬಿಆರ್‌ಪಿ) ಮತ್ತು ಶಿಕ್ಷಣ ಸಂಯೋಜಕರು(ಇಸಿಒ)ಹುದ್ದೆಗಳಿಗೆ ಫೆಬ್ರವರಿ 6 ಮತ್ತು 7 ರಂದು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ (ಬಿಆರ್‌ಸಿ), ಸಹಾಯಕ ಯೋಜನಾ ಸಮನ್ವಯಾಧಿಕಾರಿ(ಎಪಿಸಿ), ವಿಷಯ ಪರಿವೀಕ್ಷಕರು(ಎಸ್ಐ), ಸಹಾಯಕ ನಿರ್ದೇಶಕರು (MDM ಮಧ್ಯಾಹ್ನ ಬಿಸಿಯೂಟ ಯೋಜನೆ) ಈ ಹುದ್ದೆಗಳಿಗೆ ಫೆಬ್ರವರಿ 7 ಮತ್ತು 8 ರಂದು ಲಿಖಿತ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ‘ಡಯಟ್‌‘ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ವಿಧಾನ:

ವಿವಿಧ ಹಂತಗಳ ತತ್ಸಮಾನ ಶ್ರೇಣಿಯ ಹುದ್ದೆಗಳಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ. ಪ್ರಶ್ನೆಪತ್ರಿಕೆಯು ಆಂಗ್ಲ ಭಾಷೆ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ. ಲಿಖಿತ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಎರಡೂ ಪ್ರತಿಕೆಗಳಲ್ಲಿ ಶೇ 50 ರಷ್ಟು ಅಂಕಗಳನ್ನು ಪಡೆಯಬೇಕು.

ಪ್ರಶ್ನೆ ಪತ್ರಿಕೆ 1: ಇದು 85 ಅಂಕಗಳ ಪ್ರಶ್ನೆಪತ್ರಿಕೆಯಾಗಿದ್ದು, ಇದರಲ್ಲಿ ಬಹುಆಯ್ಕೆ ಮಾದರಿ ಪ್ರಶ್ನೆಗಳಿರುತ್ತವೆ. ಕನ್ನಡ, ಇಂಗ್ಲಿಷ್‌, ಸಾಮಾನ್ಯ ಜ್ಞಾನ ವಿಷಯಗಳನ್ನು ಆಧರಿಸಿದ ಪ್ರಶ್ನೆಗಳಿರುತ್ತವೆ. ಜೊತೆಗೆ, ಬೋಧನಾ ಶಾಸ್ತ್ರ, ಶೈಕ್ಷಣಿಕ ದೃಷ್ಟಿಕೋನಗಳು, ಪ್ರಚಲಿತ ವಿದ್ಯಮಾನಗಳು, ಪ್ರಚಲಿತ ಶೈಕ್ಷಣಿಕ ಕಾರ್ಯಕ್ರಮಗಳು, ಸಿ.ಸಿ.ಎ(ವರ್ಗೀಕರಣ,ನಿಯಂತ್ರಣ ಮತ್ತು ಅಪೀಲು), ಕೆ.ಸಿ.ಎಸ್.ಆರ್ (ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು), ಶೈಕ್ಷಣಿಕ ಆಡಳಿತ ಮತ್ತು 10ನೇ ತರಗತಿವರೆಗಿರುವ ಪಠ್ಯದ ವಿಷಯವನ್ನೊಳ ಗೊಂಡಿರುತ್ತದೆ.

ಪ್ರಶ್ನೆ ಪತ್ರಿಕೆ 2: ಇದೂ ಕೂಡ 85 ಅಂಕಗಳ ಪ್ರಶ್ನೆಪತ್ರಿಕೆಯಾಗಿದ್ದು, ಇದರಲ್ಲಿ ಶೇ 40 ರಷ್ಟು ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಶೇ 60ರಷ್ಟು ವಿವರಣಾತ್ಮಕ ಮಾದರಿಯ ಪ್ರಶ್ನೆಗಳಿರುತ್ತವೆ. ‌ಸಿ.ಆರ್.ಪಿ., ಬಿ.ಆರ್.ಪಿ ಮತ್ತು ಶಿಕ್ಷಣ ಸಂಯೋಜಕರ ಹುದ್ದೆಗಳಿಗೆ, ಬಿ.ಆರ್.ಪಿ(ಪ್ರೌಢ) ಹುದ್ದೆಗೆ ಕಲಾ ಮತ್ತು ವಿಜ್ಞಾನ ವಿಷಯಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆ ಇರುತ್ತದೆ. ಇದರಲ್ಲಿ ಹುದ್ದೆಯ ಕಾರ್ಯವ್ಯಾಪ್ತಿಗೆ ಸಂಬಂಧಪಟ್ಟ ವಿಷಯಗಳು, ವಿಶೇಷವಾಗಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮಗಳು, ಪ್ರೋತ್ಸಾಹದಾಯಕ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳು ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು SATS (Student Achivement Tracking System) ತಂತ್ರಾಂಶದ ಬಗ್ಗೆ, ಸೇವಾ ನಿರತ ತರಬೇತಿಗಳು ಹಾಗೂ ಅನುಪಾಲನೆ, ಗುಣಮಟ್ಟ ಸಾಧಿಸಲು ಉಪಕ್ರಮ, ಮೌಲ್ಯಾಂಕನ ಇತ್ಯಾದಿ ವಿಷಯಗಳನ್ನೊಳಗೊಂಡಿರುತ್ತವೆ. ಈ ಪ್ರಶ್ನೆ ಪತ್ರಿಕೆಗಾಗಿ ಉತ್ತರ ಬರೆಯುವವರು 10ನೇ ತರಗತಿವರೆಗಿರುವ ಪಠ್ಯವಸ್ತುವನ್ನು ಅಧ್ಯಯನ ಮಾಡಬೇಕು.

ಬಿಆರ್‌ಸಿ, ಎಪಿಸಿ, ಎಸ್‌ಐ, ಎಂಡಿಎಂ:ಈ ಹುದ್ದೆಗಳಿಗೆ ಪತ್ರಿಕೆ-1 ಸಾಮಾನ್ಯ ವಿಷಯವಾಗಿದ್ದು, ಕನ್ನಡ, ಇಂಗ್ಲಿಷ್‌, ಬೋಧನಾಶಾಸ್ತ್ರ, ಪ್ರಚಲಿತ ಶೈಕ್ಷಣಿಕ ಕಾರ್ಯಕ್ರಮಗಳು, ಶಿಕ್ಷಣ ನೀತಿ, ಶಿಕ್ಷಣ ನಿಯಮಗಳು ಮತ್ತು ಕಾಯಿದೆ, ಸಿ.ಸಿ.ಎ. ಕೆ.ಸಿ.ಎಸ್.ಆರ್. ಮತ್ತು ಶೈಕ್ಷಣಿಕ ಆಡಳಿತ ವಿಷಯಗಳು ಮತ್ತು 12ನೇ ತರಗತಿವರೆಗಿನ ಪಠ್ಯವಸ್ತುವಿರುತ್ತದೆ.

ಪತ್ರಿಕೆ-2 ರಲ್ಲಿ ಮೂರು ರೀತಿಯ ಪ್ರತ್ಯೇಕ ಪ್ರಶ್ನೆಪತ್ರಿಕೆಗಳಿರುತ್ತವೆ. ಹುದ್ದೆಯ ವ್ಯಾಪ್ತಿಗೆ ಸಂಬಂಧಿಸಿದ ವಿಷಯಗಳು ವಿಶೇಷವಾಗಿ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, SATS ತಂತ್ರಾಂಶ,ಸೇವಾನಿರತ ತರಬೇತಿ, ಗುಣಮಟ್ಟ ಸಾಧಿಸಲು ಉಪಕ್ರಮ ಮತ್ತು ಮೌಲ್ಯಾಂಕನ, ಭೋದನಾಶಾಸ್ತ್ರ ಆಹಾರ, ಪೌಷ್ತಿಕತೆ ಮತ್ತು ಆರೋಗ್ಯ, ಸ್ವಚ್ಛತೆ, ನೈರ್ಮಲ್ಯ ಮತ್ತು ಮಕ್ಕಳ ಸುರಕ್ಷತೆ, ಬಿಸಿಯೂಟ ಯೋಜನೆಯ ಬಗ್ಗೆ ಅರಿವು, ಸ್ವಯಂಸೇವಾ ಸಂಸ್ಥೆಗಳ ಪಾತ್ರ-ಅವರೊಂದಿಗೆ ಸಂಯೋಜನೆ, ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಹೆಚ್ಚಿನ ವಿದ್ಯಾರ್ಹತೆಗೆ ಅಂಕಗಳು

ನಿಗದಿಪಡಿಸಿದ ವಿದ್ಯಾರ್ಹತೆಗಿಂತ ಹೆಚ್ಚಿನ ವಿದ್ಯಾರ್ಹತೆ ಮತ್ತು ಸೇವಾನುಭವಕ್ಕೆ ನಿಗದಿತ ಅಂಕಗಳನ್ನು ನೀಡಲಾ ಗುತ್ತದೆ. ಸ್ನಾತಕೋತ್ತರ ಪದವಿ, ಎಂ.ಫಿಲ್, ಅಥವಾ ಪಿ.ಎಚ್.ಡಿ ಪದವಿ, ಗಣಕಯಂತ್ರ ಜ್ಞಾನಕ್ಕೆ, ಮತ್ತು ಪ್ರಕಟಗೊಂಡ ಲೇಖನಕ್ಕೆ ತಲಾ 5 ಅಂಕಗಳು ಹಾಗೂ ಇಲಾಖೆಯಲ್ಲಿ ಸಲ್ಲಿಸಿದ ಸೇವೆಗೂ ಅಂಕವಿದೆ.

ಪರೀಕ್ಷೆ ಕುರಿತ ಪೂರಕ ಮಾಹಿತಿಗೆ ಈ ಲಿಂಕ್ ನೋಡಿ: www.schooleducation.kar.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT