ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌

Published 4 ಆಗಸ್ಟ್ 2024, 23:30 IST
Last Updated 4 ಆಗಸ್ಟ್ 2024, 23:30 IST
ಅಕ್ಷರ ಗಾತ್ರ
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌

ವಿವರ: ಬ್ಲೂ ಸ್ಟಾರ್ ಫೌಂಡೇಷನ್  ಮೋಹನ್ ಟಿ ಅಡ್ವಾಣಿ ಸೆಂಟೆನ್ನಿಯಲ್ ಸ್ಕಾಲರ್‌ಶಿಪ್ ಪ್ರೋಗ್ರಾಂ ಮೂಲಕ ಭಾರತದಾದ್ಯಂತ ಆಯ್ದ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳಲ್ಲಿ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಹಿಂದುಳಿದ ಪದವಿಪೂರ್ವ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ

ಅರ್ಹತೆ:  ಸಿವಿಲ್ ಎಂಜಿನಿಯರಿಂಗ್ ಹೊರತುಪಡಿಸಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಇನ್‌ಫಾರ್ಮೇಷನ್‌ ಟೆಕ್ನಾಲಜಿ (ಐಟಿ), ಕಂಪ್ಯೂಟರ್ ಸೈನ್ಸ್ (ಸಿಎಸ್) ಮತ್ತು ಸಂಬಂಧಿತ ಸ್ಟೆಮ್ ಕ್ಷೇತ್ರಗಳಲ್ಲಿ ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ದಾಖಲಾದ ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಅರ್ಹರು.

ಅರ್ಜಿದಾರರಿಗೆ, ಪ್ರಥಮ ವರ್ಷದ ವಿದ್ಯಾರ್ಥಿಗಳಾದರೆ 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಕನಿಷ್ಠ ಶೇ 80ರಷ್ಟು ಅಂಕ  ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳಾದರೆ 12ನೇ ತರಗತಿಯಲ್ಲಿ ಕನಿಷ್ಠ ಶೇ 80  ಮತ್ತು  ಎಂಜಿನಿಯರಿಂಗ್‌ನ ಮೊದಲ ವರ್ಷದಲ್ಲಿ ಶೇ 75  ಅಂಕಗಳನ್ನು ಪಡೆದಿರಬೇಕು.  ಅರ್ಜಿದಾರರ ವಾರ್ಷಿಕ ಕುಟುಂಬದ ಆದಾಯವು ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು.  ಯಾವುದೇ ಇತರ ವಿದ್ಯಾರ್ಥಿವೇತನದ ಫಲಾನುಭವಿಗಳಾಗಿರಬಾರದು.

ಆರ್ಥಿಕ ಸಹಾಯ: ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ವಿದ್ಯಾರ್ಥಿಗಳಿಗೆ: ₹75,000 ಅಥವಾ ವಾರ್ಷಿಕ ಶುಲ್ಕದ ಶೇ 50ರಷ್ಟು ಭರಿಸುವುದು (ಎರಡರಲ್ಲಿ ಒಂದು ಆಯ್ಕೆ)
 ಡಿಪ್ಲೊಮಾ ವಿದ್ಯಾರ್ಥಿಗಳಿಗೆ: ₹ 30,000 ಅಥವಾ ವಾರ್ಷಿಕ ಶುಲ್ಕದ ಶೇ 75 (ಎರಡರಲ್ಲಿ ಒಂದು ಆಯ್ಕೆ)
ಅರ್ಜಿ ಸಲ್ಲಿಸಲು ಕೊನೆ ದಿನ:  20-08-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/BSFS2

ಶೇಫ್ಲರ್ ಇಂಡಿಯಾದ ವಿದ್ಯಾರ್ಥಿನಿಯರ ಸ್ಕಾಲರ್‌ಶಿಪ್ 

 
ಶೇಫ್ಲರ್ ಇಂಡಿಯಾವು ಮೊದಲ-ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ (ಅಂಗವಿಕಲ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ) ಅಧ್ಯಯನ  ಮುಂದುವರಿಸಲು ಅವಕಾಶ ಮಾಡಿಕೊಡುತ್ತದೆ.

ಅರ್ಹತೆ:  ವಿದ್ಯಾರ್ಥಿವೇತನವು ವಿದ್ಯಾರ್ಥಿನಿಯರಿಗೆ ಮಾತ್ರ ಲಭ್ಯ. 12ನೇ ತರಗತಿಯಲ್ಲಿ (ವಿಜ್ಞಾನ)ಶೇ 60 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.  ಮೊದಲ ವರ್ಷಕ್ಕೆ ದಾಖಲಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ಸಹಾಯ: ₹ 50,000

ಅರ್ಜಿ ಸಲ್ಲಿಸಲು ಕೊನೆ ದಿನ: 15-08-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ :  Short Url: www.b4s.in/praja/SIHE15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT