ಗದಗ: ‘ಡಾ. ಬಿ.ಆರ್.ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ ದಾಯಕ. ಅದಕ್ಕಾಗಿಯೇ ಅವರ ಜನ್ಮದಿನವನ್ನು ಕೇವಲ ಕ್ಯಾಲೆಂಡರ್ನಲ್ಲಿ ನೋಡಿ ಮರೆಯುವ ಬದಲು, ಅಂಬೇಡ್ಕರ್ ಅವರ ಬದುಕನ್ನು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ತತ್ವಾದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕತೆಯ ಹಾದಿಯಲ್ಲಿ ಸಾಗುತ್ತದೆ’ ಎಂದು ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎ.ಕೆ.ಮಠ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವನ್ನೂ ನೀಡಿದ್ದು ಡಾ. ಬಿ.ಆರ್.ಅಂಬೇಡ್ಕರ್. ಹಾಗಾಗಿ, ಪ್ರತಿ ಭಾರತೀಯನೂ ಅಂಬೇಡ್ಕರ್ ಫಲಾನುಭವಿಯಾಗಿದ್ದಾನೆ’ ಎಂದು ಹೇಳಿದರು.

‘ಭಾರತದ ಇತಿಹಾಸದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿ ಅಂದಿನಿಂದ ಇಂದಿನ ತನಕವೂ ನಿತ್ಯವೂ ಜನರ ಚರ್ಚೆಯಲ್ಲಿ ಬರುತ್ತಲೇ ಇರುವ ಏಕೈಕ ನಾಯಕ ಡಾ. ಬಿ.ಆರ್.ಅಂಬೇಡ್ಕರ್. ಅವರು ಕೋಟ್ಯಂತರ ಜನರ ಜೀವನವನ್ನು ಬದಲಾಯಿಸಿದ ಮಹಾನ್ ಚೇತನವೂ ಹೌದು’ ಎಂದರು.

ಉಪ ಪ್ರಾಂಶುಪಾಲೆ ಪ್ರೊ. ವೀಣಾ ಈ. ಮಾತನಾಡಿ, ‘ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂಬ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು, ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುದರವರೆಗಿನ ಬೃಹತ್ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಅಂಬೇಡ್ಕರ್’ ಎಂದರು.

ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಅಂಬೇಡ್ಕರ್ರ ಅಧ್ಯಯನಶೀಲತೆ ಪ್ರೇರಣೆ’

ಗದಗ: ನಗರದ ಜೇಸಿ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತಿ ಆಚರಿಸಲಾಯಿತು.

ಶಾಲೆಯ ಆಡಳಿತ ಮಂಡಳಿಯ ಸದಸ್ಯ ಡಾ.ಶ್ರೀಧರ್ಕುರುಡಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿದರು.

ಪ್ರಾಚಾರ್ಯರಾದ ಜಯಶ್ರೀ ಮಡಿವಾಳರ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾ ಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿ ಕೊಟ್ಟ ಮಹಾನ್ ನಾಯಕ. ಅವರ ಅಧ್ಯಯನಶೀಲತೆ, ಚಿಂತನೆ, ದೂರದೃಷ್ಟಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅಂಬೇಡ್ಕರ್ ಅವರು ತಮ್ಮ ಇಡೀ ಜೀವಮಾನವನ್ನು ಹಿಂದುಳಿದವರು, ದುರ್ಬಲರ ಏಳಿಗೆಗಾಗಿ ಮುಡಿಪಾಗಿಟ್ಟಿದ್ದರು’ ಎಂದರು.

ಕವಿತಾ ಕೆ., ಕರುಣಾ ಸಂದಿಗೋಡ ಪ್ರಾರ್ಥನೆ ಹಾಡಿದರು. ಹೀನಾಕೌಸರ ಅಬ್ಬಿಗೇರಿ ಸ್ವಾಗತಿಸಿದರು. ಮಮತಾ ಬಳ್ಳಾರಿ ವಂದಿಸಿದರು. ದಾನಮ್ಮಾ ತೆಗ್ಗಿನಕೇರಿ ನಿರೂಪಿಸಿದರು.

ಶಾಲೆಯ ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಗದಗ: ಗದಗ ಪ್ರಧಾನ ಅಂಚೆ ಕಚೇರಿ ಹಾಗೂ ಅಂಚೆ ಮನರಂಜನಾ ಕೂಟದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಿಸಲಾಯಿತು.

ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಅಂಬೇಡ್ಕರ್ ಜೀವನ, ಸಾಧನೆ, ಸಮಾನತೆಯ ಹೋರಾಟ, ಅಸ್ಪಶ್ಯತೆ ನಿರ್ಮೂಲನೆ, ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ಕಾರ್ಯಕ್ರಮವನ್ನು ಎಸ್.ವಿ.ಹಿರೇಮಠ, ಪೋತರಾಜ ಸಾಕಿ ಪ್ರಸ್ತುತಪಡಿಸಿದರು.

ಅಂಚೆ ನಿರೀಕ್ಷಕ ನಾಗರಾಜ ಮಳ್ಳಿ, ಪ್ರಧಾನ ಅಂಚೆ ಪಾಲಕ ಡಿ.ಜಿ.ಮ್ಯಾಗೇರಿ, ವಿ.ಎಂ.ಅಂಗಡಿ, ಮಂಜುನಾಥ ಕುರಿಯವರ, ಮಂಜುನಾಥ ಪಾಮೇನಹಳ್ಳಿ, ಮನೋಹರ ಕಡಿಯವರ, ವೆಂಕಟೇಶ ಆಕಳವಾಡಿ, ಶರಣಪ್ಪ ಬೇನಾಳ, ಸಿದ್ಧಲಿಂಗೇಶ ಯಂಡಿಗೇರಿ, ಉಮೇಶ ಸಂದಿಮನಿ, ಲಕ್ಷ್ಮೀ ಮಾದರ, ಶಿವಯ್ಯ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-23-873427572

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.