ಗದಗ: ಆರಂಭದಲ್ಲಿ ಪ್ರಾಸ ಪದಗಳು ಮಕ್ಕಳನ್ನು ಆಕರ್ಷಿಸಬಲ್ಲದು. ಮಕ್ಕಳ ಭಾಷಾ ಕೌಶಲ್ಯ, ಸಂವಹನ ಕಲೆ ವೃದ್ದಿಸುವಲ್ಲಿ ಮಕ್ಕಳ ಕವಿತೆಗಳು ಸಹಕಾರಿಯಾಗಬಲ್ಲದು. ಅದಕ್ಕಾಗಿ ಮಕ್ಕಳಿಗೆ ಕವಿತೆಗಳ ಅಧ್ಯಯನ ಶಿಬಿರವನ್ನು ಏರ್ಪಡಿಸಬೇಕು ಎಂದು ಹಿರಿಯ ಸಾಹಿತಿ ನೀ. ಶ್ರೀಶೈಲ ಹೇಳಿದರು

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂ.ಎಸ್.ಹುಲ್ಲೂರ ತರಬೇತಿ ಕೇಂದ್ರದ ಸಹಯೋಗದಲ್ಲಿ ಗದಗ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಹಿರಿಯ ಕವಿಗಳು ತಮ್ಮ ಕವಿತೆಗಳನ್ನು ಓದಬೇಕು ಆಲಿಸಿದ ಮಕ್ಕಳು, ಪ್ರಶ್ನೆ ಕೇಳಲು ಅವಕಾಶವಿರಬೇಕು. ಹೊಸದಾಗಿ ಬರೆಯುವ ಮಕ್ಕಳಿಗೆ, ಪ್ರೇರಣೆಯನ್ನು ಒದಗಿಸುತ್ತದೆ. ಮಕ್ಕಳ ಕಾವ್ಯದ ಭಾಷೆ ಸುಲಲಿತವಾಗಿದ್ದಾಗ ಮಾತ್ರ ಮಕ್ಕಳ ಮನವನ್ನು ತಣಿಸಬಲ್ಲದು ಎಂದು ಹೇಳಿದರು.

ಡಿಜಿಟಲ್ ವ್ಯಸನದ ಸಂದರ್ಭದಲ್ಲಿ ಸಾಹಿತ್ಯದ ಒಲವು ಮೂಡಿಸುವ ಅನಿವಾರ್ಯತೆಯಿದೆ. ಮಾನಸಿಕ ತಲ್ಲಣಗಳಿಂದ ಮಕ್ಕಳನ್ನು ರಕ್ಷಣೆ ಮಾಡಲು ಮನೋವಿಕಾಸಕ್ಕೆ ಪೂರಕವಾದ ಪದ್ಯಗಳನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕೇಳಿಸುವ ಅವಕಾಶವನ್ನು ಸೃಷ್ಟಿಸುವುದು ಅನಿವಾರ್ಯ ಎಂದರು.

ಕವಿಗೋಷ್ಠಿಯಲ್ಲಿ ಸರ್ವಾಧ್ಯಕ್ಷ ತಯ್ಯಬಲಿ ಹೊಂಬಳ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಎಂ.ಎಸ್.ಹುಲ್ಲೂರ, ಡಿ. ಎಸ್. ಬಾಪುರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-23-1043129190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.