ಗದಗ: 2025–26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಗದಗ ಜಿಲ್ಲೆ ಶೇ 76.65 ಫಲಿತಾಂಶ ದಾಖಲಿಸಿ ರಾಜ್ಯ ಮಟ್ಟದಲ್ಲಿ 30ನ ಸ್ಥಾನದಲ್ಲಿದೆ.

2024–25ನೇ ಸಾಲಿನಲ್ಲಿ ಗದಗ ಜಿಲ್ಲೆ ಶೇ 66.64 ಅಂಕ ಗಳಿಸಿ 25ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ 10.01ರಷ್ಟು ಹೆಚ್ಚು ಫಲಿತಾಂಶ ದಾಖಲಿಸಿದ್ದರೂ, ರ್ಯಾಂಕಿಂಗ್ನಲ್ಲಿ ಇನ್ನಷ್ಟು ಕೆಳಕ್ಕೆ ಕುಸಿದಿದೆ.

ಕಳೆದ ಮೂರು ವರ್ಷಗಳಅಂಕಿ ಅಂಶಗಳನ್ನು ಗಮನಿಸಿದರೆ ಗದಗ ಜಿಲ್ಲೆ ರ್ಯಾಂಕಿಂಗ್ನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇರುವುದು ಗೊತ್ತಾಗುತ್ತದೆ.

2022–23ನೇ ಸಾಲಿನಲ್ಲಿ ಶೇ 66.91 ಫಲಿತಾಂಶ ದಾಖಲಿಸಿ, 30ನೇ ಸ್ಥಾನದಲ್ಲಿತ್ತು. 2023–24ನೇ ಸಾಲಿನಲ್ಲಿ ಗದಗ ಜಿಲ್ಲೆ ಶೇ 72.86 ಫಲಿತಾಂಶ ದಾಖಲಿಸಿ, ಕೊನೆ ಸ್ಥಾನದಲ್ಲಿತ್ತು. 2024–25ನೇ ಸಾಲಿನಲ್ಲಿ ಶೇ 66.64 ಫಲಿತಾಂಶ ದಾಖಲಿಸಿ, 25ನೇ ಸ್ಥಾನದಲ್ಲಿತ್ತು. ಕಳೆದ ವರ್ಷ ರ್ಯಾಂಕಿಂಗ್ನಲ್ಲಿ ಏಳು ಸ್ಥಾನ ಮೇಲಕ್ಕೇರಿದ್ದರೂ ಜಿಲ್ಲೆಯ ಶೇಕಡಾವಾರು ಫಲಿತಾಂಶ ಶೇ 6.22ರಷ್ಟು ಕುಸಿತ ಕಂಡಿತ್ತು. ಪ್ರಸಕ್ತ ವರ್ಷ ಶೇ 76.65 ಫಲಿತಾಂಶ ದಾಖಲಿಸಿ 30ನೇ ಸ್ಥಾನಕ್ಕೆ ಕುಸಿದಿದೆ.

ಸುಧಾರಿಸದ ಫಲಿತಾಂಶ:

ಪಿಯು ಫಲಿತಾಂಶ ಸುಧಾರಣೆಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಉಪನ್ಯಾಸಕರಿಗೆ ತರಬೇತಿ ಶಿಬಿರ, ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗಿತ್ತು. ಆದರೆ, ಪಿಯು ಫಲಿತಾಂಶದಲ್ಲಿ ಈ ಬಾರಿಯಾದರೂ ಟಾಪ್ ಟೆನ್ ಒಳಗೆ ಸ್ಥಾನ ಪಡೆಯಬೇಕು ಎಂಬ ಆಸೆ ಈಡೇರಿಲ್ಲ. ಬದಲಾಗಿ, ಕಳೆದ ವರ್ಷಕ್ಕಿಂತ ಮತ್ತಷ್ಟು ಕಳಪೆ ಸಾಧನೆ ಮಾಡಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.