ಗದಗ: ‘ಪುಸ್ತಕಗಳು ಜ್ಞಾನಭಂಡಾರ ಆಗಿವೆ. ವಿದ್ಯಾರ್ಥಿಗಳ ಚಿಂತನೆ, ಭಾಷಾ ಸಾಮರ್ಥ್ಯ, ವ್ಯಕ್ತಿತ್ವವನ್ನುಅಭಿವೃದ್ಧಿಪಡಿಸುತ್ತವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ಮತ್ತು ಟಿ.ವಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಕಾರಣ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ರೂಢಿ ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದು ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷ ಆನಂದ್ ಪೋತ್ನಿಸ್ ಹೇಳಿದರು.

ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜಿನಲ್ಲಿ ಕಾಮರ್ಸ್ನ ಕನ್ನಡ ಮತ್ತು ರೀಡಿಂಗ್ ರೂಂ ವಿಭಾಗದ ಸಹಯೋಗದಲ್ಲಿ ‘ನಾನು ನನ್ನ ಪುಸ್ತಕ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪುಸ್ತಕ ಓದುವುದರಿಂದ ಹೊಸ ವಿಷಯಗಳ ಅರಿವು ಮೂಡುತ್ತದೆ. ಪಠ್ಯದ ಜೊತೆಗೆ ಕಥೆ, ಕಾದಂಬರಿ, ವಿಜ್ಞಾನ, ಇತಿಹಾಸ ಮತ್ತು ಮಹನೀಯರ ಜೀವನಚರಿತ್ರೆಗಳನ್ನು ಓದುವುದರಿಂದ ಜ್ಞಾನ ವಿಸ್ತಾರವಾಗುತ್ತದೆ. ಪುಸ್ತಕಗಳ ಓದು ಒಳ್ಳೆಯ ಮೌಲ್ಯ, ಪರಿಶ್ರಮ, ಶಿಸ್ತು, ಪ್ರಾಮಾಣಿಕತೆಯ ಗುಣಗಳನ್ನು ಬೆಳೆಸುತ್ತದೆ. ಓದಿನಿಂದ ಮನಸ್ಸಿಗೆ ಏಕಾಗ್ರತೆ, ಶಾಂತಿ ದೊರೆಯುತ್ತಿದೆ. ಪ್ರತಿದಿನ ಗ್ರಂಥಾಲಯಗಳಿಗೆ ಭೇಟಿ ನೀಡಬೇಕು, ರೀಡಿಂಗ್ ರೂಮ್ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಪ್ರಾಚಾರ್ಯರಾದ ವಿ. ಟಿ. ನಾಯ್ಕರ ಮಾತನಾಡಿ, ‘ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡುವುದು ಮತ್ತು ಓದಿದ ವಿಷಯವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಬಹಳಷ್ಟು ಉಪಯುಕ್ತವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದಲ್ಲಿ ‘ಭಗವದ್ಗೀತೆ’ ಗ್ರಂಥದ ಬಗ್ಗೆ ಅಕ್ಷಯ್ ಕುಮಾರ್ ಗುಡಿ, ಸಾಧಿಯ ಪರ್ವೀನ್ ಎಂ ಹೊನ್ನಳ್ಳಿ, ‘ಹೇಳಿ ಹೋಗು ಕಾರಣ’ ಕಾದಂಬರಿ ಬಗ್ಗೆ ಭರತ ಸ್ವಾಮಿ, ‘ಮೈಂಡ್ ಮ್ಯಾಜಿಕ್’ ಪುಸ್ತಕದ ಬಗ್ಗೆ ನಂದಿತಾ ಹಂಪಿ ಹೊಳಿ, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿ ಬಗ್ಗೆ ರಾಜೇಶ್ವರಿ ಪಾಟೀಲ, ‘ಅತ್ಯಮೂಲ್ಯ ನುಡಿಮುತ್ತುಗಳು’ ಗ್ರಂಥದ ಬಗ್ಗೆ ಸೌಜನ್ಯ ಮರಿಗೌಡರ ಮಾತನಾಡಿದರು.

ರೀಡಿಂಗ್ ರೂಂ ವಿಭಾಗದ ಮುಖ್ಯಸ್ಥ ಪ್ರೊ. ಬಾಹುಬಲಿ ಪಿ. ಜೈನರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-23-1495594193

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.