ಗದಗ: ಪ್ರತಿಯೊಬ್ಬರ ಯಶಸ್ಸಿನ ಹಿಂದೆ ತಾಯಿಯ ಪ್ರೀತಿ, ತ್ಯಾಗ ಹಾಗೂ ಶ್ರಮ ಇದೆ ಎಂದು ಆದರ್ಶ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಪಿ. ಆರ್. ಅಡವಿ ಹೇಳಿದರು.

ಗದಗ ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಸ್ಮಾರಕ ವಾಣಿಜ್ಯ ಮಹಾವಿದ್ಯಾಲಯ, ಮಹಿಳಾ ಸಂಘ ಹಾಗೂ ಐಕ್ಯೂಎಸಿ ವತಿಯಿಂದ ‘ಮೆನೋಪಾಸ್ ಮತ್ತು ಹಾರ್ಮೋನುಗಳ ಬದಲಾವಣೆಗಳು’ ಕುರಿತು ತಾಯಂದಿರು ಮತ್ತು ವಿದ್ಯಾರ್ಥಿನಿಯರಿಗಾಗಿ ನಡೆದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಟಿ. ನಾಯಕ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಾಯಿಯನ್ನು ಗೌರವಿಸಿ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು

ಸ್ತ್ರೀರೋಗ ತಜ್ಞೆ ಡಾ. ತೇಜಸ್ವಿನಿ ಹಿರೇಮಠ ಅವರು ಗರ್ಭಾವಸ್ಥೆಯಿಂದ ಪ್ರಾರಂಭಿಸಿ ಬಾಲ್ಯ, ಯೌವನ, ತಾಯ್ತನ ಹಾಗೂ ಮೆನೋಪಾಸ್ ಹಂತದವರೆಗೆ ಮಹಿಳೆಯರ ಜೀವನದಲ್ಲಿ ನಡೆಯುವ ದೈಹಿಕ ಮತ್ತು ಹಾರ್ಮೋನಲ್ ಬದಲಾವಣೆಗಳನ್ನು ಸರಳ ಹಾಗೂ ವೈಜ್ಞಾನಿಕವಾಗಿ ವಿವರಿಸಿದರು.

ಮೆನೋಪಾಸ್ ಸಂದರ್ಭದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಮಾನಸಿಕ ಆರೋಗ್ಯ ಹಾಗೂ ಕುಟುಂಬದ ಬೆಂಬಲದ ಅಗತ್ಯತೆಯ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು. ಮಹಿಳಾ ಸಂಘದ ಅಧ್ಯಕ್ಷೆ ಸಲ್ಮಾ ಬೆಳಗಾವಿ, ಐ.ಕ್ಯೂ.ಎ.ಸಿ ಸಂಯೋಜಕ ಎಸ್. ಡಿ. ಭಂಡಾರ್ಕರ್, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-23-1173666082

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.