ಗದಗ: ‘ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಖಗೋಳದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ವೈಜ್ಞಾನಿಕ ಸಂಶೋಧನಾ ಮನೋಭಾವನೆ ಬೆಳೆಸಿಕೊಳ್ಳಬೇಕು’ ಎಂದು ನೂರಾನಿ ಚಾರಿಟಬಲ್ ಟ್ರಸ್ಟ್ ಚೇರ್ಮನ್ ಪ್ಯಾರಅಲಿ ನೂರಾನಿ ಹೇಳಿದರು.

ಗದಗ ಐಎಂಎ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ನೂರಾನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಟಗೇರಿಯ ಖಗೋಳ ತಾರಾಲಯಕ್ಕೆ ಅತ್ಯಾಧುನಿಕ ಟೆಲಿಸ್ಕೋಪ್ ಅನ್ನು ದೇಣಿಗೆ ನೀಡಿ ಮಾತನಾಡಿದರು.

‘ವಿಜ್ಞಾನ ಲೋಕವನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಲೆಂಬ ಸದುದ್ದೇಶದಿಂದ ಟೆಲಿಸ್ಕೋಪ್ ನೀಡಲಾಗಿದೆ. ತಾರಾಲಯಕ್ಕೆ ಬರುವ ವಿದ್ಯಾರ್ಥಿಗಳು ಆಕಾಶಕಾಯಗಳನ್ನು ವೀಕ್ಷಿಸುವುದರ ಜತೆಗೆ, ಅವರಲ್ಲಿ ಖಗೋಳದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸುವ ಉದ್ದೇಶವಿದೆ’ ಎಂದರು.

ತಾರಾಲಯಕ್ಕೆ ಟೆಲಿಸ್ಕೋಪ್ ನೀಡಿದ ಪ್ಯಾರಅಲಿ ನೂರಾನಿ ಅವರಿಗೆ ಗದಗ ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ ಅಭಿನಂದಿಸಿದರು.

ವಿಜ್ಞಾನಿ ದಾಸಗುಪ್ತಾ, ಹೈಟೆನ್ ಸಂಸ್ಥೆಯ ಸಾಯಿಕುಮಾರ್, ತಾರಾಲಯದ ಉಸ್ತುವಾರಿ ಸರೋಜಿನಿ ಬಂಡಿವಡ್ಡರ, ಮಹ್ಮದ್ಶಫಿ ಯರಗುಡಿ, ಎಂ.ಎಚ್. ಸವದತ್ತಿ, ಶ್ಯಾಮ್ ಲಾಂಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-23-385128052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.