ಗದಗ: ‘ಶಿಕ್ಷಕರು ವಿಷಯದ ಆಳಕ್ಕೆ ಇಳಿದು ಪರಿಣಾಮಕಾರಿಯಾಗಿ ಬೋಧಿಸಿದಾಗ ಮಾತ್ರ ವಿಷಯ ಮಕ್ಕಳ ಮನಸ್ಸಿಗೆ ತಲುಪಲು ಸಾಧ್ಯ. ನಿರಂತರ ಓದು ಮತ್ತು ಜ್ಞಾನಾರ್ಜನೆ ಶಿಕ್ಷಕರ ವ್ಯಕ್ತಿತ್ವವನ್ನು ಬಲಪಡಿಸುತ್ತದೆ’ ಎಂದು ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಹೇಳಿದರು.

ಬಾದಾಮಿಯ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನ ವತಿಯಿಂದ ಗುರುಶ್ರೀ ಮೋನಪ್ಪ ಧರ್ಮಪ್ಪ ಮನೋಚಾರ್ಯ ಗುರುಗಳ 102ನೇ ಜಯಂತ್ಯುತ್ಸವದ ಅಂಗವಾಗಿ ನಗರದ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ 19ನೇ ಗುರುಸ್ಮರಣೆ ಕಾರ್ಯಕ್ರಮದಲ್ಲಿ ‘ಪರಿಣಾಮಕಾರಿ ಬೋಧನೆ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪ್ರತಿಷ್ಠಾನದ ಮುಖ್ಯಸ್ಥ ಆಕಾಶ್ ಡಿ. ಮನೋಚಾರ್ಯ ಮಾತನಾಡಿ, ‘ಗುರುಸ್ಮರಣೆ ಕಾರ್ಯಕ್ರಮದ ವೇದಿಕೆ ಮೂಲಕ ಮೌಲ್ಯಾಧಾರಿತ ಸೇವಾಭಾವ, ಸಾಮಾಜಿಕ ಹೊಣೆಗಾರಿಕೆ ಮತ್ತು ಸೃಜನಾತ್ಮಕ ಚಿಂತನೆಗಳನ್ನು ಯುವಪೀಳಿಗೆಯ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರುವಂತೆ ಮಾಡುವ ಸಂಕಲ್ಪವನ್ನು ಪ್ರತಿಷ್ಠಾನ ಹೊಂದಿದೆ. ಸಮಾಜಕ್ಕೆ ದಾರಿದೀಪವಾಗುವಂತಹ ಆದರ್ಶ ವ್ಯಕ್ತಿತ್ವಗಳನ್ನು ಸಮಾಜಕ್ಕೆ ಪರಿಚಯಿಸುವ ಪ್ರತಿಷ್ಠಾನದ ಈ ಪ್ರಯತ್ನವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಮುಂದುವರಿಯುತ್ತಿದೆ’ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಎ. ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಿರಿಗಂಧ ಬಳಗದ ಅಧ್ಯಕ್ಷ ದಾಜೀಬಾ ಜಗದಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿಯ ಡಾ. ಪ್ರವೀಣ್ ಅಂಗಡಿ ಅವರು ‘ಯುವ ಸ್ವಾಸ್ಥ್ಯ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾದಾನ ಸಮಿತಿಯ ಪ್ರಾಚಾರ್ಯರಾದ ಗಂಗೂಬಾಯಿ ಪವಾರ್, ಪ್ರತಿಷ್ಠಾನದ ಮಾರ್ಗದರ್ಶಕ ಅಶೋಕ ನಾಗಠಾಣ ವೇದಿಕೆಯಲ್ಲಿದ್ದರು.

ಗುರುಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಗರದ ಐದು ಬಿ.ಇಡಿ. ಕಾಲೇಜುಗಳಿಂದ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗಾಗಿ ಅಂತರ-ಕಾಲೇಜು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಭಿನಂದನಾ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ‘ಗುರುಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಬಾಗಲಕೋಟೆ ಜಿಲ್ಲೆಯ ರವೀಂದ್ರ ಮೂಲಿಮನಿ ಹಾಗೂ ಕೊಪ್ಪಳ ಜಿಲ್ಲೆಯ ಬೀರಪ್ಪ ಅಂಡಗಿ ಚಿಲವಾಡಗಿ ಅವರನ್ನು ಸನ್ಮಾನಿಸಲಾಯಿತು.

ಸಮಾಜಮುಖಿ ಚಿಂತನೆಗಳೊಂದಿಗೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕೊಪ್ಪಳ ಜಿಲ್ಲೆಯ ಹುಚ್ಚಮ್ಮ ಬಸಪ್ಪ ಚೌಧರಿ, ದಕ್ಷಿಣ ಕನ್ನಡ ಜಿಲ್ಲೆಯ ಕೆ. ನಾರಾಯಣ ನಾಯಕ, ಚಿತ್ರದುರ್ಗ ಜಿಲ್ಲೆಯ ಗೊಳಪ್ಪ ತಳವಾರ, ಹಾವೇರಿ ಜಿಲ್ಲೆಯ ಕನ್ನಪ್ಪ ಛತ್ರದ ಹಾಗೂ ಬೆಳಗಾವಿ ಜಿಲ್ಲೆಯ ಗೋಪೇಶ್ವರ ದಾಸ ಅವರಿಗೆ ವಿಶಿಷ್ಟ ಸೇವಾ ಸನ್ಮಾನ ನೀಡಿ ಗೌರವಿಸಲಾಯಿತು.

ಪಾರಂಪರಿಕ ಹಸ್ತ ಕಲೆ, ಲೋಹ ಶಿಲ್ಪಕಲೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಗಲಕೋಟೆಯ ನಾಗಲಿಂಗಪ್ಪ ಗಂಗೂರ ಹಾಗೂ ರಾಯಚೂರು ಜಿಲ್ಲೆಯ ರಹಿಮಾನಸಾಬ ನದಾಫ್ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ‘ಮಾತೋಶ್ರೀ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-23-413402987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.