ಗದಗ: ಬಸವಾದಿಶರಣರ ವಿಚಾರಗಳನ್ನು ಬಾಲ್ಯದಲ್ಲಿಯೇ ಅರಿತು ಆಚರಿಸಿದರೆ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ. ವಚನಗಳಲ್ಲಿರುವ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ವ್ಯಕ್ತಿ ಹಿತದ ಜೊತೆಗೆ ಸಮಾಜದ ಉನ್ನತಿಯನ್ನು ಹೊಂದಿವೆ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ವಚನ ಪಾಠಶಾಲೆ ವತಿಯಿಂದ ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಚನ ಪಾಠಶಾಲೆ ವತಿಯಿಂದ ವಚನ ಕಂಠಪಾಠ, ವಚನ ನ್ಯತ್ಯ, ಶರಣ ಸಂಸ್ಕೃತಿ ಶಿಬಿರ, ರಸಪ್ರಶ್ನೆ, ವಿಚಾರ ಸಂಕಿರಣ, ನಾಟಕೋತ್ಸವಗಳನ್ನು ವರ್ಷಪೂರ್ತಿ ಆಯೋಜಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ‘ಇಂದಿನ ಸಂದರ್ಭದಲ್ಲಿ ಶರಣರ ಚಿಂತನೆಗಳು ಅಗತ್ಯವಿದೆ. ಶಾಲೆಗಳಲ್ಲಿ ಸೀಮಿತ ವಿಚಾರಗಳಿದ್ದು, ಅವುಗಳನ್ನು ವ್ಯಾಪಕಗೊಳಿಸಲು ವಚನ ಪಾಠಶಾಲೆ ಕಾರ್ಯನಿರ್ವಹಿಸಬೇಕು. ಮಠದ ವಚನ ಪಾಠಶಾಲೆ ನಾಡಿನ ಎಲ್ಲ ಮಠಗಳಿಗೆ ಪ್ರೇರಣೆ ನೀಡಲಿ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಅಂಗಡಿ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ಸ್ವಾಗತಿಸಿದರು.

ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿ ಸ್ಪರ್ಧೆಗಳು ನಡೆದವು. ಎಸ್.ವಿ.ಪವಾಡಿಗೌಡ್ರ, ನಿಂಗು ಸೊಲಗಿ, ಎಸ್.ಯು.ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ.ಎ.ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ, ರಾಜೇಶ್ವರ ಬಡ್ನಿ, ಗಿರಿಜಕ್ಕ ಧರ್ಮರೆಡ್ಡಿ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-23-1143710306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.