ಗದಗ: ‘ಸಾಹಿತ್ಯ ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಕೈಹಿಡಿದು ನಡೆಸುವ ಪ್ರಬಲ ಮಾಧ್ಯಮವಾಗಿದೆ. ಸಾಹಿತ್ಯದ ಕನ್ನಡಿಯ ಮೂಲಕ ಬದುಕಿನ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಲಿಯಬೇಕು’ ಎಂದು ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಿಯಾನಂದಜೀ ಮಹಾರಾಜ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆದರ್ಶ ಶಿಕ್ಷಣ ಸಮಿತಿ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ನಡೆದ ಯುವ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಯುವಕರು ತಮ್ಮ ಸಾಮರ್ಥ್ಯ ಅರಿಯಲು ಈ ಸಮಾವೇಶದ ಗೋಷ್ಠಿಯ ವಿಷಯಗಳು ಅನುಕೂಲವಾಗಿವೆ. ವ್ಯಕ್ತಿ ತನ್ನ ಸಾಮರ್ಥ್ಯ ಬೆಳೆಸಿಕೊಳ್ಳುವುದರ ಜತೆಗೆ ಸಮಾಜದ ಹಿತವನ್ನು ಬಯಸುವಂತಾದರೆ ದೇಶ ಸಮೃದ್ಧವಾಗುತ್ತದೆ. ಯುವಜನರು ಸಣ್ಣತನ, ಸೋಮಾರಿತನದಿಂದ ಹೊರಬರಬೇಕು’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಯುವಕರು ಇಂದು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅನುಪಯೋಗ ಕಾರ್ಯಗಳಲ್ಲಿ ವಿನಿಯೋಗಿಸುತ್ತಿದ್ದಾರೆ. ಯುವಕರು ದೇಶದ ಆಶಾಕಿರಣ. ಅತಿಯಾದ ಅಂತರ್ಜಾಲ ಬಳಕೆ, ಕೃಷಿಯ ಕುರಿತಾದ ಅನಾಸಕ್ತಿ, ಓದುವ ಸಂಸ್ಕೃತಿಯಿಂದ ವಿಮುಖತೆ ಯುವಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ’ ಎಂದರು.

‘ಯುವಕರ ಕ್ರಿಯಾಹೀನತೆ ದೇಶದ ಉನ್ನತಿಯ ದೃಷ್ಟಿಯಿಂದ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿಂತನ ಮಂಥನ ನಡೆಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ವೇದಿಕೆ ಮೇಲೆ ಪ್ರಾಚಾರ್ಯ ಡಾ.ವಿ.ಟಿ.ನಾಯ್ಕರ, ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣವರ, ಹನಮಂತಗೌಡ ಕಲ್ಮನಿ ಇದ್ದರು. ಬಾಹುಬಲಿ ಜೈನರ್ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಅಂದಾನೆಪ್ಪ ವಿಭೂತಿ, ಚಂದ್ರಶೇಖರ ವಸ್ತ್ರದ, ಕೆ.ಎಚ್.ಬೇಲೂರ, ಎ.ಎಸ್.ಮಕಾನದಾರ, ಅನ್ನದಾನಿ ಹಿರೇಮಠ, ಅಂದಾನಯ್ಯ ಅರವಟಗಿಮಠ, ಶ್ವೇತಾ ಕೊಟಗಿ, ಎಸ್.ಎಂ.ಕಾತರಕಿ, ಸತೀಶ ಚನ್ನಪ್ಪಗೌಡರ, ಡಿ.ಎಸ್.ಬಾಪುರಿ, ಅಮರೇಶ ರಾಂಪೂರ, ಆರ್.ಎಲ್.ಕುಲಕರ್ಣಿ, ಲಿಂಗರಾಜ ರೇಷ್ಮೆ, ಎಸ್.ಬಿ.ಜಾಧವ, ಎಸ್.ಯು.ಸಜ್ಜನಶೆಟ್ಟರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-23-1453860622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.