ಗದಗ: ‘ಸಾಮಾಜಿಕ ಜೀವಿಯಾಗಿರುವ ವ್ಯಕ್ತಿ ಸಮಾಜ ಚಿಂತನೆಗಳನ್ನು ಒಳಗೊಳ್ಳುವ ಮೂಲಕ ವ್ಯಕ್ತಿಗತ ಪ್ರಗತಿ ಸಾಧಿಸಬೇಕು. ಯುವಕರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದನಾಶೀಲತೆ ಹೊಂದಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಚಲಿತ ಸಂಗತಿಗಳನ್ನು ಒಳಗೊಂಡು ಈ ಸಮಾವೇಶ ಸಂಘಟಿಸಲಾಗಿತ್ತು. ಯುವಕರಲ್ಲಿ ಜಾಗೃತಿ ಮೂಡಿಸಲು ಗೋಷ್ಠಿಗಳು ಯಶಸ್ವಿಯಾಗಿವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಯುವ ಸಾಹಿತ್ಯ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ಓದಿನ ಹರವು ಹೆಚ್ಚಿಸಿಕೊಂಡು ಸಮಾಜದ ಉನ್ನತಿಗಾಗಿ ಶ್ರಮಿಸಬೇಕು’ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಪಿ.ಆರ್.ಅಡವಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತು ಯುವಕರ ಬಳಿಗೆ ತೆರಳಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಯುವಕರು ಆದರ್ಶ ಚಿಂತನೆಗಳ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಆದರ್ಶ ಶಿಕ್ಷಣ ಸಮಿತಿ ಕಾರ್ಯದರ್ಶಿ ಎ.ಡಿ.ಗೋಡಖಿಂಡಿ, ಕೋಶಾಧ್ಯಕ್ಷ ಮುಕುಂದ ಪೋತ್ನಿಸ್, ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷರಾದ ಚೇತನ ಅಂಗಡಿ, ಸಮ್ಮೇಳನದ ಸಂಚಾಲಕ ಬಾಹುಬಲಿ ಜೈನರ್ ವೇದಿಯಲ್ಲಿದ್ದರು.

ಈ ಸಂದರ್ಭದಲ್ಲಿ ಯುವ ಸಾಧಕರಾದ ಶಿವಾನಂದ ಹಿರೇಮಠ, ನಮ್ರತಾ ಪಾಟೀಲ, ಆಕಾಶ ಮರಿಗೌಡರ, ಪ್ರಸಾದ ಸುತಾರ, ವಾಣಿಶ್ರೀ ಕಲಬುರ್ಗಿ, ಹನುಮಂತ ಕುಲಕರ್ಣಿ, ರಾಹುಲ ರಾಠೋಡ, ಮಾನ್ಯಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ರಾಜೇಶ್ವರಿ ಬಡ್ನಿ ನಿರೂಪಿಸಿದರು. ಡಿ.ಎಸ್.ಬಾಪುರಿ ಸ್ವಾಗತಿಸಿದರು. ಸತೀಶಕುಮಾರ ಚನ್ನಪ್ಪಗೌಡರ ವಂದಿಸಿದರು. ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-23-1006842647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.