ಗಜೇಂದ್ರಗಡ: ಹಂಡೇವಜೀರ್ ಸಮಾಜದ ವಿದ್ಯಾರ್ಥಿಗಳಿಗೆ 2ಎ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ಒತ್ತಾಯಿಸಿ ಮಂಗಳವಾರ ಸಮಾಜದ ಮುಖಂಡರು ಹಾಗೂ ಎಸ್.ಎಫ್.ಐ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಎಸ್.ಎಫ್.ಐ ರಾಜ್ಯ ಘಟಕದ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, ‘ತಾಲ್ಲೂಕಿನಲ್ಲಿ ಹಿಂದೂ ಲಿಂಗಾಯತ, ಲಿಂಗವಂತ ಜಾತಿಯ ಹಂಡೇವಜೀರ ಉಪಜಾತಿಗೆ ಸೇರಿದ ಹಲವು ಕುಟುಂಬಗಳಿದ್ದು, ಈ ಕುಟುಂಬಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದವರಾಗಿದ್ದಾರೆ’ ಎಂದರು.

‘ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಪತ್ರ ಆದೇಶ ಅನುಸಾರದಲ್ಲಿ ಬರುವ ಉಪಜಾತಿ ಕ್ರಮ ಸಂಖ್ಯೆ 37 ರಲ್ಲಿ ಹಿಂದೂ ಲಿಂಗಾಯತ, ಲಿಂಗವಂತ ಉಪಜಾತಿಗೆ ಸೇರಿದ ಹಂಡೇವಜೀರ್ ಸಮಾಜಕ್ಕೆ 2ಎ ಜಾತಿ ಪ್ರಮಾಣ ಪತ್ರ ಒದಗಿಸುತ್ತಾ ಬಂದಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಕ್ಷುಲ್ಲಕ ಕಾರಣಕ್ಕಾಗಿ ಇಡೀ ಸಮಾಜವನ್ನು ಗುರಿ ಮಾಡಿ ಕುಂಟು ನೆಪ ಹೇಳಿ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ನಿರಾಕರಿಸುವುದು ಅಧಿಕಾರಿಶಾಹಿ ದರ್ಪವಾಗಿದೆ. ಇದೂ ಒಂದು ರೀತಿಯ ಅಸ್ಪೃಶ್ಯತೆಯಾಗಿದೆ’ ಎಂದು ಆಗ್ರಹಿಸಿದರು.

ಎಸ್.ಎಫ್.ಐ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, ‘ಕೊಪ್ಪಳ ಜಿಲ್ಲೆಯಲ್ಲಿ ಹಂಡೇವಜೀರ್ ಸಮುದಾಯಕ್ಕೆ 2ಎ ಜಾತಿ-ಆದಾಯ ಪ್ರಮಾಣಪತ್ರ ಸಿಗುತ್ತಿದೆ. ಆದರೆ ಗಜೇಂದ್ರಗಡ ತಾಲ್ಲೂಕಿನಲ್ಲಿರುವ ಅವರ ಸಂಬಂಧಿಕರಿಗೆ ಸಿಗದಿರುವುದು ಖಂಡನೀಯ’ ಎಂದು ತಿಳಿಸಿದರು.

‘ತಹಶೀಲ್ದಾರ್ಗೆ ಸಂದೇಹವಿದ್ದರೆ ಅವರ ತಂದೆ ದಾಖಲೆ ಪಡೆಯಲಿ. ಆದರೆ 1993ರ ನಂತರವೇ ಈ ಹಂಡೇವಜೀರ್ ಜಾತಿ ಕಾಲಂನಲ್ಲಿ ಹೆಚ್ಚು ಬಳಕೆಗೆ ಬಂದಿದೆ. ಇದಕ್ಕೂ ಮೊದಲು ಇವರ ಜಾತಿ ಕಾಲಂನಲ್ಲಿ ಹಿಂದೂ ಲಿಂಗಾಯತ ಎಂದು ಇರುವುದರಿಂದ ಇಂತಹ ಪ್ರಕರಣಗಳಲ್ಲಿ ಸ್ಥಾನಿಕ ಚೌಕಾಸಿ ಮಾಡಿ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ಅವಕಾಶವಿದೆ. ಆದರೆ ವಿನಾಕಾರಣ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವುದು ಉದ್ದೇಶ ಪೂರ್ವಕವಾಗಿ ಈ ಸಮುದಾಯವನ್ನು ಗುರಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ’ ಎಂದು ದೂರಿದರು.

ಹಂಡೇವಜೀರ್ ಸಮುದಾಯದ ಹಲವು ಮುಖಂಡರು ಮಾತನಾಡಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ರೋಣ ತಾಲ್ಲೂಕಿನ ತಹಶಿಲ್ದಾರ್ ನಾಗರಾಜ.ಕೆ ಮಾತನಾಡಿ, ‘ಈಗ ಗಜೇಂದ್ರಗಡ ತಹಶೀಲ್ದಾರರು ರಜೆ ಇರುವುದರಿಂದ ನನಗೆ ಪ್ರಭಾರಿ ಜವಾಬ್ದಾರಿ ಇದೆ. ಸರ್ಕಾರದ ಸುತ್ತೋಲೆ ಆದೇಶಗಳನ್ನು ಆಧರಿಸಿ ನಾವು ಪ್ರಮಾಣ ಪತ್ರ ನೀಡುತ್ತವೆ. ಈ ಪ್ರತಿಭಟನೆಯ ಮೂಲಕ ಸ್ಥಾನಿಕ ಚೌಕಾಸಿ ಮಾಡಲು ಕೇಳಿದ್ದೀರಿ. ಗ್ರಾಮ ಆಡಳಿತಾಧಿಕಾರಿ ಮತ್ತು ಕಂದಾಯ ನಿರೀಕ್ಷಕರಿಗೆ ಸ್ಥಾನಿಕ ಚೌಕಾಸಿ ಮಾಡಲು ಆದೇಶ ಮಾಡುತ್ತೇನೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುತ್ತೆನೆ’ ಎಂದು ಭರವಸೆ ನೀಡಿದರು.

ಬಳಿಕ ಹೋರಾಟವನ್ನು ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಎಸ್.ಎಫ್.ಐ ಮುಖಂಡ ಅನಿಲ ರಾಠೋಡ, ಸಮಾಜದ ಮುಖಂಡರಾದ ಅಂದನಗೌಡ ಪಾಟೀಲ, ವೀರಭದ್ರಗೌಡರ ಪಾಟೀಲ, ನಿಂಗನಗೌಡರ ಪಾಟೀಲ, ಚಂದ್ರಗೌಡ ಪಾಟೀಲ, ಶರಣು ಮಾಟರಂಗಿ, ರಾಜು ಪಾಟೀಲ, ಕಳಕೇಶ ರಾಠೋಡ, ಚಂದ್ರಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಸಕ್ರಪ್ಪ ಕುಡಗುದ್ರಿ, ಗಂಗನಗೌಡ ಪಾಟೀಲ, ಉಮೇಶಗೌಡ ಪಾಟೀಲ, ನಿಂಗನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-320170911

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.