ಕಾರಟಗಿ: ‘ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಈ ಭಾಗದ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕವಿತೆಗಳು ಗಟ್ಟಿತನದಿಂದ ಕೂಡಿರಬೇಕು. ಅವುಗಳು ಓದಿಸಿಕೊಂಡು ಹೋಗುವಂತಿರಬೇಕು. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ನಟೇಶ ಹೇಳಿದರು.

ಪಟ್ಟಣದ ಸೃಷ್ಟಿ ಕಾವ್ಯ ಪ್ರಕಾಶನ ವಿದ್ಯಾ ಭಾರತಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಸೃಷ್ಟಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ತಲೇಖಾನ ಮಠದ ವೀರಭದ್ರ ಶರಣರು ಮಾತನಾಡಿ, ‘ಇಂದಿನ ಯುವ ಜನಾಂಗ ದಾರಿತಪ್ಪಿ ಹೋಗುತ್ತಿರುವ ಅಪಾಯ ಎದುರಾಗಿದೆ. ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ’ ಎಂದರು.

ಕವಿ ಸದಾಶಿವ ಸೊರಟೂರು ಅವರ ‘ದೇವರನ್ನು ಹೊರ ಹಾಕುತ್ತೇನೆ’ ಕೃತಿ ಕುರಿತು ಸಾಹಿತಿ ಪವನಕುಮಾರ ಗುಂಡೂರು ಮಾತನಾಡಿದರು.

ಈ ಸಂದರ್ಭದಲ್ಲಿ ಕವಿ ಸದಾಶಿವ ಸೊರಟೂರು ಅವರಿಗೆ ಸೃಷ್ಟಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿದ್ಯಾ ಭಾರತಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹರಾವ್, ಸೃಷ್ಠಿ ಕಾವ್ಯ ಪುರಸ್ಕಾರದ ಸಂಚಾಲಕ ಅಶೋಕ ಹೊಸಮನಿ, ಅಧ್ಯಕ್ಷೆ ಮಂಗಲ ಟೆಂಕಪ್ಪನವರ, ಅಮರೇಶ ಮೈಲಾಪುರ, ಚನ್ನಬಸಪ್ಪ, ಮಾನಸ, ದ್ಯಾಮಣ್ಣ, ಹನುಮೇಶ ಸೇರಿದಂತೆ ಅನೇಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-35-762318826

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.