ಗಂಗಾವತಿ: ನಗರದ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ‘ಕನ್ನಡದಲ್ಲಿ ಕೃಷಿ ಸಾಹಿತ್ಯ’ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.

ಎಂ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ಮಲ್ಲೇಶ ಬಂಕಾಪುರ ಮಾತನಾಡಿ, ‘ನಮ್ಮ ಕನ್ನಡದ ಕಾವ್ಯ ಪರಂಪರೆ, ಕೃಷಿ ಬಗ್ಗೆ ಸಾಕಷ್ಟು ಕಾಳಜಿ, ಬದ್ಧತೆ ತೋರಿದೆ. ಕೃಷಿ ಈ ದೇಶದ ಆತ್ಮ. ಕೃಷಿ ನಮ್ಮ ಬದುಕಿನ ಜೀವಾಳ. ಶರಣರು, ದಾಸರು, ತತ್ವಪದಕಾರರು, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಸೇರಿ ಹಲವು ಕವಿಗಳು ಕೃಷಿಯ ಮಹತ್ವ ಸಾರಿದ್ದಾರೆ. ನಾವೆಷ್ಟೇ ಆಧುನಿಕತೆ ಬೆಳೆಸಿಕೊಂಡರೂ ಭೂಮಿ ಮತ್ತು ಕೃಷಿ ಜಗತ್ತಿನ ಜೀವ ಸಂಕುಲವನ್ನ ರಕ್ಷಣೆ ಮಾಡುತ್ತದೆ’ ಎಂದರು.

ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿ, ‘ವಿದ್ಯಾರ್ಥಿಗಳಿಗೆ ವಿವಿಧ ಜ್ಞಾನ ಶಿಸ್ತುಗಳ ಬಗ್ಗೆ ಅರಿವು ಮೂಡಿಸಲು ಸಂಶೋಧನೆ ಬಗ್ಗೆ ಆಳವಾದ ಜ್ಞಾನ ನೀಡುವ ಆಶಯದಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ’ ಎಂದರು.

ವಿಭಾಗದ ಅತಿಥಿ ಉಪನ್ಯಾಸಕ ಗುಂಡೂರು ಪವನಕುಮಾರ್ ಮಾತನಾಡಿ, ‘ಸಾಹಿತ್ಯದ ಬಹುಮುಖಿ ಅಧ್ಯಯನ ಜ್ಞಾನದ ಹಲವು ಆಯಾಮಗಳು ಪರಿಚಯಿಸುತ್ತದೆ. ಕುಮಾರವ್ಯಾಸ ಭಾರತ ಕಾವ್ಯದಲ್ಲಿ ಕೃಷಿ ಇಲ್ಲದ ದೇಶ, ಕೆಟ್ಟ ದೇಶ ಎನ್ನುತ್ತಾನೆ. ಕೃಷಿಯೇ ಎಲ್ಲದಕ್ಕೂ ಮೂಲ ಎನ್ನುವ ಸಾರ್ವಕಾಲಿಕ ಸತ್ಯವನ್ನು ಕಟ್ಟಿಕೊಟ್ಟಿದ್ದಾನೆ’ ಎಂದರು.

ಬಸವರಾಜ ಗೌಡನಬಾವಿ, ಪಾಗುಂಡಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-35-2108027738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.