ಗೌರಿಬಿದನೂರು: ಡಾ. ಎಚ್.ಎನ್ ಗ್ಲೋಬಲ್ ಫೋರಂ ತಂಡದ ಸದಸ್ಯರು, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಎಂದು ಶುಕ್ರವಾರ ಬೈಚಾಪುರ ಗ್ರಾಮದ ಮನೆ–ಮನೆಗೆ ಭೇಟಿ ನೀಡಿ ಅರಿವು ಮೂಡಿಸಿದರು.

ಡಾ. ಎಚ್.ಎನ್. ಗ್ಲೋಬಲ್ ಫೋರಂ ಸಂಸ್ಥಾಪಕ ಡಾ. ಆರ್.ಕೆ. ಮಂಜುನಾಥ್ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿ, ಗುಣಮಟ್ಟದ ಶಿಕ್ಷಣ ನೀಡಲು ಪ್ರಥಮ ಹಂತದಲ್ಲಿ ಬೈಚಾಪುರ, ಕೋಟೆ ಶಾಲೆ, ಹುದುಗೂರು, ನಗರಗೆರೆ, ಗೆದರೆ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ನಗರದ ಎಸ್ಎಸ್ಇಎ ಶಾಲೆ, ಕಲ್ಲಿನಾಯಕನಹಳ್ಳಿ, ಕುರೂಡಿ, ಕಾದಲವೇಣಿ, ನಕ್ಕಲಹಳ್ಳಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ ಎಂದರು.

ಈ ಶಾಲೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಉಪಕರಣ ಒದಗಿಸಿ, ಶಿಕ್ಷಣ ತಜ್ಞರ ನೆರವಿನೊಂದಿಗೆ ಆನ್ಲೈನ್ ತರಗತಿ ನಡೆಸಲಾಗುವುದು. ಶಾಲೆಗೆ ನುರಿತ ಶಿಕ್ಷರನ್ನು ಸಹ ನೀಡುವ ಯೋಜನೆ ರೂಪಿಸಲಾಗಿದೆ. ಜೊತೆಗೆ, ಬಸ್ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲಾಗುವುದು. ಈ ಎಲ್ಲ ಶಾಲೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಸಹ ಮಾಡಲಾಗುವುದು ಎಂದರು.

ಈ ವೇಳೆ ಡಾ.ಎಚ್.ಎನ್. ಗ್ಲೋಬಲ್ ಫೋರಂ ಸದಸ್ಯ ಜಿ.ಎನ್. ನಾಗರಾಜ್, ನಾಗರಾಜಪ್ಪ, ರಮೇಶ್, ಚಂದ್ರಶೇಖರ್, ಶಾಲಾ ಶಿಕ್ಷಕರಾದ ಶಶಿಕಲಾ, ಸಿದ್ದಪ್ಪ, ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-16-532986132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.