ಗೌರಿಬಿದನೂರು: ತಾಲ್ಲೂಕಿನ ಪತಂಜಲಿ ಯೋಗ ಮಂದಿರದಲ್ಲಿ ಕ್ರಿಯಾಕ್ಟೀವ್ ತಂಡದಿಂದ 'ಕನ್ನಡ ಪುಸ್ತಕ ವಿಮರ್ಶಾ ಲೋಕಕ್ಕೆ ಒಂದು ಪ್ರವೇಶ' ಎಂಬ ಕಾರ್ಯಕ್ರಮ ಭಾನುವಾರ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಗೀತಾ ಮಾತನಾಡಿ, ‘ಮಕ್ಕಳು ಮೊಬೈಲ್ ಬಳಕೆ ಬದಲು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ದೊಡ್ಡ ಬದಲಾವಣೆ ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಕ್ರಿಯಾಕ್ಟೀವ್ ತಂಡದ ಸಮನ್ವಯಾಧಿಕಾರಿ ಪ್ರೊ.ಸುಪ್ರಿಯಾ ನಾಯಕ ಮಾತನಾಡಿ, ‘ಪೋಷಕರು ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ಮಾಡಿಕೊಟ್ಟು ಉತ್ತಮ ಪುಸ್ತಕ ಓದಲು ಪ್ರೇರೇಪಿಸಿದಾಗ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗುವುದರ ಜೊತೆಗೆ ಉನ್ನತ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕಿ ಆಶಾ ಜಗದೀಶ್ ಹಾಗೂ ಯಶಸ್ವಿ ಕಾಲೇಜಿನ ಕನ್ನಡ ಉಪನ್ಯಾಸಕ ಬಾಷಾ ಅವರು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕ ಹಾಗೂ ಅವರ ಕಥೆಗಳ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು.

ತೇಜಸ್ವಿ ಮತ್ತು ಡಾ.ವಿ.ವಿ.ಬೆಳವಾಡಿ ಬರೆದಿರುವ ‘ನಡೆಯುವ ಕಡ್ಡಿ, ಹಾರುವ ಎಲೆ' ಪುಸ್ತಕ ವಿಮರ್ಶಾ ಸ್ಪರ್ಧೆಯು ಮಕ್ಕಳಿಗೆ ಹೊಸ ಆಯಾಮದ ಅನುಭವ ನೀಡಿತು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಮಕ್ಕಳು ಕೃತಿ ಕುರಿತು ತಮ್ಮ ವಿಮರ್ಶೆ ಮಂಡಿಸಿದರು. ಉತ್ತಮವಾಗಿ ವಿಮರ್ಶೆ ಮಂಡಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಗಿರಿಧರ್ ವೈ.ಜಿ., ಸಂಕಲ್ಪ ಗೌರೀಶ್, ಕ್ರಿಯಾಕ್ಟೀವ್ ಸದಸ್ಯರಾದ ರಂಗನಾಥ್, ಗಂಗಾಸಾಗರ್, ಪ್ರತಿಕ್ಷ, ಮೇಘನಾ, ಪೋಷಕರು, ಶಿಕ್ಷಕರು, ಸಾಹಿತ್ಯಾಸಕ್ತರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-16-1624377867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.